Tuesday, August 16, 2022

Latest Posts

ದೇಶದಾದ್ಯಂತ ಇನ್ಮುಂದೆ ದಿನದ 24 ಗಂಟೆಗಳ ಕಾಲವೂ ಕೋವಿಡ್ ವ್ಯಾಕ್ಸಿನ್ ಲಭ್ಯ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಾದ್ಯಂತ ಈಗಾಗಲೇ ಎರಡನೇ ಹಂತದ ಕೊರೋನಾ ಲಸಿಕೆ ಅಭಿಯಾನ ಆರಂಭಗೊಂಡಿದ್ದು, ಸಾರ್ವಜನಿಕರು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್​ ಡೋಸ್‌ಗಳನ್ನು ಪಡೆದುಕೊಳ್ಳುತ್ತಿದ್ದಾರೆ.
ಇದರ ಮಧ್ಯೆ ಮಹತ್ವದ ಘೋಷಣೆ ಮಾಡಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್, ಇನ್ಮುಂದೆ ದಿನದ 24 ಗಂಟೆಗಳ ಕಾಲವೂ ಲಸಿಕೆಯನ್ನು ನೀಡಲು ಅನುಮತಿ ನೀಡಲಾಗಿದೆ ಎಂದರು.
ಈ ಮೊದಲು ಕೋವಿಡ್ ವ್ಯಾಕ್ಸಿನ್ ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮಾತ್ರ ಲಭ್ಯವಾಗುತ್ತಿತ್ತು. ಇದರಿಂದ ಲಸಿಕೆ ನೀಡುವ ಕಾರ್ಯ ನಿಧಾನಗತಿಯಲ್ಲಿ ಸಾಗುತ್ತಿತ್ತು.
ಈ ಹಿನ್ನೆಲೆ ಕೋವಿಡ್ ಲಸಿಕೆ ನೀಡುವ ಕಾರ್ಯದಲ್ಲಿ ಮತ್ತಷ್ಟು ವೇಗ ಕಲ್ಪಿಸುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರಿಗೆ ದೇಶದ ಜನರ ಸಮಯ ಹಾಗೂ ಆರೋಗ್ಯದ ಮೌಲ್ಯದ ಬಗ್ಗೆ ಚೆನ್ನಾಗಿ ತಿಳಿದಿದೆ. ಹೀಗಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹರ್ಷವರ್ಧನ್‌ ತಿಳಿಸಿದರು.
ಇನ್ನು ನಿನ್ನೆ ಸುದ್ದಿಗೋಷ್ಠಿ ನಡೆಸಿದ್ದ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್​ ಭೂಷಣ್​, ಕೋವಿನ್‌​​ 2.0 ಅಪ್ಲಿಕೇಶನ್​ನಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ಲಸಿಕೆ ಹಾಕುವ ಕಾಲಾವಧಿ ತೆಗೆದುಹಾಕಲಾಗಿದೆ ಎಂದು ತಿಳಿಸಿದ್ದರು. ಇದರ ಜತೆಗೆ ಸಂಜೆ 5 ಗಂಟೆಯ ನಂತರ ಲಸಿಕೆ ನೀಡುವುದು ಅಥವಾ ಸ್ಥಗಿತಗೊಳಿಸುವ ವಿಚಾರದ ಬಗ್ಗೆ ಬಗ್ಗೆ ಆಸ್ಪತ್ರೆಗಳು ನಿರ್ಧರಿಸಬೇಕು ಎಂದು ಸೂಚಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss