Thursday, August 18, 2022

Latest Posts

ಎಲ್ಲಾ ಉದ್ಯೋಗಿಗಳು, ಕುಟುಂಬಕ್ಕೆ ಕೋವಿಡ್ ಲಸಿಕೆ: ರಿಲಾಯನ್ಸ್ ಸಂಸ್ಥೆ ಕಳಿಸಿದೆ ಇ-ಮೇಲ್!

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಾದ್ಯಂತ ಕೊರೋನಾ ಲಸಿಕೆಯ 2ನೇ ಹಂತದ ಅಭಿಯಾನ ಪ್ರಾರಂಭವಾಗಿದ್ದು, ಈ ವೇಳೆ ಎಲ್ಲಾ ರಿಲಯನ್ಸ್ ಉದ್ಯೋಗಿಗಳು ಲಸಿಕೆ ಪಡೆದುಕೊಳ್ಳಬೇಕು ಎಂದು ಸಂಸ್ಥೆ ಸೂಚಿಸಿದೆ.

ಅಷ್ಟೇ ಅಲ್ಲಾ, ಎಲ್ಲಾ ಉದ್ಯೋಗಿಗಳು ಮತ್ತು ಕುಟುಂಬಸ್ಥರ ಲಸಿಕೆ ವೆಚ್ಚವನ್ನು ರಿಲಯನ್ಸ್ ಸಂಸ್ಥೆಯೇ ಭರಿಸುತ್ತದೆ ಎಂದು ರಿಲಯನ್ಸ್ ಫೌಂಡೇಷನ್ ನ ಸಂಸ್ಥಾಪಕಿ ನೀತಾ ಎಂ ಅಂಬಾನಿ ಇ-ಮೇಲ್ ಮುಖಾಂತರ ತಿಳಿಸಿದ್ದಾರೆ.

ನಮ್ಮ ರಿಲಯನ್ಸ್ ಕುಟುಂಬದವರ ಆರೋಗ್ಯ ಹಾಗೂ ಸಂತೋಷ ಕಾಪಾಡುವುದು ನಮ್ಮ ಕರ್ತವ್ಯ. ಎಲ್ಲಾ ಉದ್ಯೋಗಿಗಳು ಕೊರೋನಾ ಲಸಿಕೆ ಪಡೆಯಲು ನೊಂದಾಯಿಸಿಕೊಳ್ಳಿ. ಈ ವೆಚ್ಚವನ್ನು ರಿಲಯನ್ಸ್ ಸಂಸ್ಥೆಯೇ ಭರಿಸುತ್ತದೆ ಎಂದು ತಿಳಿಸಿದ್ದಾರೆ.

ನಿಮ್ಮೆಲ್ಲರ ಸಹಕಾರದೊಂದಿಗೆ ಕೊರೋನಾ ಸೋಂಕನ್ನು ನಾಶ ಮಾಡಬಹುದು. ಅಲ್ಲಿಯವರೆಗೆ ಕೊರೋನಾ ಮುನ್ನೆಚ್ಚರಿಕಾ ಕ್ರಮಗಳನ್ನು ಮುಂದುವರಿಸಿ ಎಂದಿದ್ದಾರೆ.

ಈ ಬಗ್ಗೆ 2020ರಲ್ಲಿ ನಡೆದ ರಿಲಯನ್ಸ್ ಡೇ ದಿನದಂದು ವ್ಯವಸ್ಥಾಪಕ ನಿರ್ದೇಶಕ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ, ಭಾರತದಲ್ಲಿ ಅನುಮೋದಿತ ಲಸಿಕೆ ಲಭ್ಯವಾದ ತಕ್ಷಣ, ರಿಲಯನ್ಸ್ ಎಲ್ಲಾ ಉದ್ಯೋಗಿಗಳು ಮತ್ತು ಕುಟುಂಬ ಸದಸ್ಯರಿಗೆ ಲಸಿಕೆ ಹಾಕುವ ಯೋಜನೆಯನ್ನು ನೀಡಲಾಗುತ್ತದೆ ಎಂಬ ಭರವಸೆ ನೀಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!