ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, May 18, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಕೋವಿಡ್ ನಿಯಮಾವಳಿ ಉಲ್ಲಂಘನೆ: ಕಲ್ಯಾಣ ಮಂಟಪದ ಮೇಲೆ ದಾಳಿ

ದಿಗಂತ ವರದಿ ಮಂಡ್ಯ :

ನಗರದ ಕಲ್ಯಾಣಮಂಟಪವೊಂದರಲ್ಲಿ ಅನುಮತಿ ಇಲ್ಲದೆ ಹಾಗೂ ಕೋವಿಡ್ ನಿಯಮಾವಳಿ ಉಲ್ಲಂಘಿಸಿ ನಡೆಯುತ್ತಿದ್ದ ಮದುವೆ ಸಮಾರಂಭದ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಕಲ್ಯಾಣಮಂಟಪ ಮಾಲೀಕರು ಸೇರಿದಂತೆ ಗಂಡು-ಹೆಣ್ಣಿನ ಕಡೆಯವರಿಗೆ ದಂಡ ವಿಧಿಸಿದ ಘಟನೆ ಶುಕ್ರವಾರ ನಡೆಯಿತು.
ಮದುವೆ ಸಮಾರಂಭಗಳಿಗೆ ನಿಗದಿಪಡಿಸಿರುವ 500 ಜನರಿಗಿಂತ ಹೆಚ್ಚು ಜನರನ್ನು ಸೇರಿಸಿಕೊಂಡು ವಿವಾಹ ನಡೆಸುತ್ತಿದ್ದರ ಬಗ್ಗೆ ಸಾರ್ವಜನಿಕರಿಂದ ದೂರು ಕೇಳಿಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ಚಂದ್ರಶೇಖರ ಶಂ.ಗಾಳಿ ಹಾಗೂ ನಗರಸಭೆ ಆಯುಕ್ತ ಎಸ್.ಲೋಕೇಶ್ ಅವರು ಪೊಲೀಸರೊಂದಿಗೆ ಕಲ್ಯಾಣಮಂಟಪದ ಮೇಲೆ
ದಾಳಿ ನಡೆಸಿದರು.
ಈ ಸಮಯದಲ್ಲಿ ಕಲ್ಯಾಣಮಂಟಪದೊಳಗೆ 500ಕ್ಕಿಂತ ಹೆಚ್ಚು ಜನರು ಸೇರಿರುವುದು, ಅವರಲ್ಲಿ ಬಹುತೇಕರು ಮಾಸ್ಕ್ ಧರಿಸದಿರುವುದು, ಸಾಮಾಜಿಕ ಅಂತರ ಪಾಲನೆ ಮಾಡದಿರುವುದು ಕಂಡುಬಂದಿತು. ಊಟದ ಹಾಲ್‌ನಲ್ಲೂ ಹೆಚ್ಚು ಜನರು ಕುಳಿತು ಊಟ ಮಾಡುತ್ತಿರುವುದನ್ನು ವೀಕ್ಷಿಸಿದರು.
ಆನಂತರ ಕಲ್ಯಾಣಮಂಟಪಗಳಿಗೆ ಸೂಚಿಸಲಾಗಿರುವ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದಿರುವ ಬಗ್ಗೆ ಮಾಲೀಕರನ್ನು ಅಧಿಕಾರಿಗಳು ಪ್ರಶ್ನಿಸಿದರು. ಆಗ ಅವರು ಹೊರಗೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ ಬರುವಂತೆ ನಾಮಲಕ ಹಾಕಿರುವುದನ್ನು ತೋರಿಸಿದರು. ಕಲ್ಯಾಣಮಂಟಪದೊಳಗಿದ್ದ ನೂರಾರು ಮಂದಿಯಲ್ಲಿ ಹೆಚ್ಚು ಜನರು ಮಾಸ್ಕ್ ಧರಿಸದಿರುವ ಬಗ್ಗೆ ಪ್ರಶ್ನಿಸಿದಾಗ ನಿರುತ್ತರರಾದರು.
ಕಲ್ಯಾಣಮಂಟಪದ ಎದುರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಮಾಸ್ಕ್ ಧರಿಸಿದವರಿಗೆ ಮಾತ್ರ ಪ್ರವೇಶ ನೀಡುವುದು, ಪ್ರತಿಯೊಬ್ಬರಿಗೂ ಸ್ಯಾನಿಟೈಸರ್ ಹಾಕುವುದು, ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ವ್ಯವಸ್ಥೆ ಮಾಡಬೇಕಾದ್ದು ಕಲ್ಯಾಣಮಂಟಪ ಮಾಲೀಕರ ಕರ್ತವ್ಯ. ಈ ನಿಯಮಗಳನ್ನು ನೀವು ಪಾಲಿಸಿಲ್ಲವೇಕೆ ಎಂದು ಪೌರಾಯುಕ್ತ ಎಸ್.ಲೋಕೇಶ್ ಪ್ರಶ್ನಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss