ಕೋವಿಡ್ ನಿಯಮ ಸಡಿಲ: ವಿದೇಶದಿಂದ ಆಗಮಿಸುವವರಿಗೆ ಹೋಂ ಕ್ವಾರೆಂಟೀನ್ ಇಲ್ಲ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ವಿಮಾನಗಳಿಂದ ಆಗಮಿಸುವ ಪ್ರಯಾಣಿಕರಿಗೆ ಕೋವಿಡ್ ನಿಯಮಗಳನ್ನು ಸಡಿಲಗೊಳಿಸಿದೆ. ಫೆ.14 ರಿಂದ ಪರಿಷ್ಕೃತ ನಿಯಮಗಳು ಜಾರಿಗೆ ಬರಲಿದ್ದು, ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಏಳು ದಿನಗಳ ಹೋಂ ಕ್ವಾರೆಂಟೀನ್‌ಗೆ ಒಳಗಾಗಬೇಕಿಲ್ಲ. ಅಂತೆಯೇ ಎಂಟನೇ ದಿನ ಕೋವಿಡ್ ಆರ್‌ಟಿಪಿಸಿಆರ್ ಪರೀಕ್ಷೆಗೂ ಒಳಪಡಬೇಕಿಲ್ಲ.

ಹೋಂ ಕ್ವಾರೆಂಟೀನ್ ಬದಲಾಗಿ ಅಂತಾರಾಷ್ಟ್ರೀಯ ಪ್ರಯಾಣಿಕರು 14 ದಿನಗಳ ಕಾಲ ಸ್ವಯಂ ಆರೋಗ್ಯ ನಿಗಾ ವಹಿಸಬೇಕಿದೆ. ಪ್ರಯಾಣಕ್ಕೂ ಮುನ್ನ 72 ಗಂಟೆಗಳ ಹಿಂದೆ ಪಡೆದ ಆರ್‌ಟಿಪಿಸಿಆರ್ ವರದಿ ಹಾಗೂ ಲಸಿಕೆ ಪಡೆದ ಪ್ರಮಾಣಪತ್ರಗಳನ್ನು ಅಪ್ಲೋಡ್ ಮಾಡುವುದಕ್ಕೆ ಆಯ್ಕೆ ನೀಡಲಾಗಿದೆ. ಅಲ್ಲದೇ ಕೋವಿಡ್‌ಗೆ ಸಂಬಂಧಿಸಿದಂತೆ ಅಪಾಯಕಾರಿ ದೇಶಗಳೆಂದು ಗುರುತಿಸುವ ಪದ್ಧತಿ ಕೈಬಿಡಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!