7-12 ವರ್ಷ ವಯಸ್ಸಿನ ಮಕ್ಕಳಿಗೆ ಕೋವೊವ್ಯಾಕ್ಸ್ ಲಸಿಕೆ: ಗ್ರೀನ್ ಸಿಗ್ನಲ್ ನೀಡಿದ DCGI

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವೊವ್ಯಾಕ್ಸ್ ಕೋವಿಡ್ -19 ಲಸಿಕೆಯನ್ನು 7-12 ವರ್ಷ ವಯಸ್ಸಿನ ಮಕ್ಕಳಿಗೆ ನಿರ್ಬಂಧಿತ ತುರ್ತು ಬಳಕೆಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ( DCGI) ಮಂಗಳವಾರ ಅನುಮೋದಿಸಿದೆ .
ಕಳೆದ ವರ್ಷ ಡಿಸೆಂಬರ್ 28 ರಂದು ವಯಸ್ಕರಲ್ಲಿ ಮತ್ತು ಮಾರ್ಚ್ 9 ರಂದು 12-17 ವಯೋಮಾನದವರಲ್ಲಿ ನಿರ್ಬಂಧಿತ ಬಳಕೆಗೆ ಕೋವೊವ್ಯಾಕ್ಸ್ ಅನ್ನು ಡಿಸಿಜಿಐ ಅನುಮೋದಿಸಿತ್ತು. ಇದೀಗ 7-12 ವರ್ಷ ವಯಸ್ಸಿನ ಮಕ್ಕಳಿಗೆ ತುರ್ತು ಬಳಕೆಗೆ ಗ್ರೀನ್ ಸಿಗ್ನಲ್ ನೀಡಿದೆ.
6-12 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್ನ ಕೋವ್ಯಾಕ್ಸಿನ್, 5-12 ವರ್ಷದೊಳಗಿನ ಮಕ್ಕಳಿಗೆ ಬಯೋಲಾಜಿಕಲ್ ಇ ಕೋವಿಡ್ -19 ಲಸಿಕೆ ಕಾರ್ಬೆವ್ಯಾಕ್ಸ್ ಮತ್ತು 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಝೈಕೋವ್ಡಿ (ಝೈಡಸ್ ಕ್ಯಾಡಿಲಾ ಲಸಿಕೆ) ಅನ್ನು ಈಗಾಗಲೇ ಅನುಮೋದಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!