ಕೆಲವೊಬ್ಬರಿಗೆ ಹೊಳೆಯದ ಐಡಿಯಾ ಒಬ್ಬರಿಗೆ ಮಾತ್ರ ಹೊಳೆಯುತ್ತದೆ. ಆಗ ಈ ಐಡಿಯಾ ನಮಗೇಕೆ ಹೊಳೆದಿಲ್ಲ ಎನಿಸುತ್ತದೆ. ಅವರೇಕೆ ಇಷ್ಟೊಂದು ಕ್ರಿಯೇಟಿವ್ ಎನಿಸುತ್ತದೆ. ನಾವೇಕೆ ಅವರ ಹಾಗೆ ಕ್ರಿಯೇಟಿವ್ ಆಗಿಲ್ಲ ಎನಿಸುತ್ತದೆ. ಎಲ್ಲರೂ ಹುಟ್ಟುತ್ತಲೇ ಕ್ರಿಯೇಟಿವ್ ಆಗಿಯೇ ಇರುತ್ತಾರೆ. ಅದನ್ನು ಬೆಳೆಸಿಕೊಳ್ಳುವುದಿಲ್ಲ. ಕ್ರಿಯೇಟಿವ್ ಥಿಂಕಿಂಗ್ ಬೆಳೆಸಿಕೊಳ್ಳುವುದು ಹೇಗೆ? ಈ ಟಿಪ್ಸ್ ಫಾಲೋ ಮಾಡಿ..
- ಕಂಫರ್ಟ್ ಝೋನ್ ಬಿಟ್ಟು ಹೊರಬನ್ನಿ: ಮಾಡಿದ್ದನ್ನೇ ಮಾಡುತ್ತಿದ್ದರೆ ಆಗಿದ್ದೇ ಆಗುತ್ತದೆ. ಬದಲಾವಣೆ ಬೇಕಾದರೆ ಹೊಸತಾಗಿ ಏನನ್ನಾದರೂ ಮಾಡಿ. ದಿನಾ ಮಾಡುವಕೆಲಸವನ್ನೇ ಮಾಡುತ್ತೀರಿ, ಒಂದು ದಿನಾ ಹೊಸತೇನನ್ನಾದರೂ ಟ್ರೈಮಾಡಿ. ಫಲ ನೋಡಿ. ಸರಿಯಾಗದಿದ್ದರೆ ಇನ್ನೇನನ್ನಾದರೂ ಟ್ರೈ ಮಾಡಿ..
- ಬೈಗುಳ ಇದ್ದದ್ದೇ!: ನೀವು ಕ್ರಿಯೇಟಿವ್ ಆಗಿ ಯೋಚಿಸಿದಾಗ ಅದು ಎಲ್ಲರಿಗಿಂತ ವಿಭಿನ್ನವಾಗಿರುತ್ತದೆ. ಅದನ್ನು ಜಗತ್ತು ತಕ್ಷಣ ಒಪ್ಪುವುದಿಲ್ಲ. ನಿಮ್ಮಂತಹ ಕ್ರಿಯೇಟಿವ್ ಮಂದಿಗೆ ಮಾತ್ರ ನಿಮ್ಮ ಐಡಿಯಾ ಚೆನ್ನಾಗಿದೆ ಎನಿಸುತ್ತದೆ. ಹಾಗಾಗಿ ಜನ ಬೇಡ ಎಂದು, ರಿಜೆಕ್ಟ್ ಮಾಡಿದ ಎಷ್ಟೋ ಐಡಿಯಾಗಳು ಇದೀಗ ಚಾಲ್ತಿಯಲ್ಲಿದೆ. ಕ್ರಿಯೇಟಿವ್ ಐಡಿಯಾದಿಂದಲೇ ಹೊಸತು ಹುಟ್ಟುವುದು ಎಂದು ನಂಬಿ.
- ಕನಸುಗಳನ್ನು ನೋಟ್ ಮಾಡಿ: ಕನಸುಗಳು ಎಷ್ಟು ಕ್ರಿಯೇಟಿವ್ ಅಲ್ಲವಾ? ವಿಚಿತ್ರ ಎನಿಸಿದರೂ ಹೀಗಾಗಿದ್ದರೆ ಹೇಗಿರುತ್ತಿತ್ತು ಎನಿಸುತ್ತದೆ. ಆದರೆ ಕನಸುಗಳು ಯಾವಾಗಲೂ ನೆನಪಿರುವುದಿಲ್ಲ. ಹಾಸಿಗೆ ಬಳಿ ಒಂದು ಪೆನ್ ಹಾಗೂ ಪುಸ್ತಕ ಇಟ್ಟುಕೊಳ್ಳಿ. ಏಳುವಾಗ ಎಷ್ಟು ನೆನಪಿದೆಯೋ ಅದನ್ನು ಬರೆದುಬಿಡಿ. ಇದು ಕ್ರಿಯೇಟಿವ್ ಐಡಿಯಾಗಳಿಗೆ ಜನ್ಮ ನೀಡುತ್ತದೆ.
- ಒಬ್ಬರೇ ಯೋಚಿಸಿ: ಕೆಲವೊಬ್ಬರಿಗೆ ಒಂದೊಂದು ಜಾಗದಲ್ಲಿ ಕುಳಿತು ಯೋಚಿಸುವಾಗ ಒಂದೊಂದು ವಿಷಯಗಳು ಹೊಳೆಯುತ್ತದೆ. ನಿಮ್ಮ ಮನೆಯ ಟಾಯ್ಲೆಟ್ ಆಗಿರಲಿ. ಮೊಬೈಲ್ ಬಿಟ್ಟು ಹೋಗಿ ಅಥವಾ ತೆಗೆದುಕೊಂಡೇ ಹೋಗಿ ಆಲೋಚನೆಗಳಿಗೆ ಸಮಯ ನೀಡಿ. ಇನ್ನು ಕೆಲವರಿಗೆ ಒಬ್ಬರೇ ನಡೆಯುತ್ತಾ, ಬಸ್ನಲ್ಲಿ ಕುಳಿತಿದ್ದಾಗ, ಬಟ್ಟೆ ಒಣಗಿ ಹಾಕುವಾಗ ಹೀಗೆ ಒಂದೊಂದು ಸಮಯಕ್ಕೆ ವಿಚಿತ್ರ ಆಲೋಚನೆ ಸುಳಿಯುತ್ತದೆ.
- ಗೊತ್ತಿಲ್ಲದವರ ಬಳಿ ಮಾತನಾಡಿ: ಮನೆಯಲ್ಲಿ ಪರಿಚಯವಿಲ್ಲದರ ಜೊತೆ ಮಾತು ಬೇಡ ಎಂದೇ ಹೇಳಿಕೊಟ್ಟಿರುತ್ತಾರೆ. ಆದರೆ ಒಮ್ಮೊಮ್ಮೆ ಮಾತನಾಡಿ. ಅವರ ಆಲೋಚನೆ ನಿಮಗಿಂತ ವಿಭಿನ್ನವಾಗಿರಬಹುದು. ಅವರ ಮಾತಿನಲ್ಲಿ ನಿಮಗೊಂದು ಐಡಿಯಾ ಹೊಳೆಯಬಹುದು. ಆಗಾಗ ಮಾತನಾಡಿ.
- ಜಂಕ್ ಫುಡ್ ನಿಲ್ಲಿಸಿ: ನಾವು ತಿನ್ನುವ ಆಹಾರ ನಮ್ಮ ಬ್ರೇನ್ನ್ನು ಸೋಂಬೇರಿ ಮಾಡಬಹುದು. ಆಲೋಚಿಸಲು ಸಾಧ್ಯವಾಗದಂತೆ ಮಾಡಬಹುದು. ಜಂಕ್ ಫುಡ್ ನಿಲ್ಲಿಸಿ, ಬ್ರೇನ್ ಫುಡ್ ತಿನ್ನಿ. ಆರೋಗ್ಯಕರ ಆಹಾರದಿಂದ ಆರೋಗ್ಯಕರ ಆಲೋಚನೆ ಸಾಧ್ಯ.
- ಬ್ರೇನ್ಸ್ಟಾರ್ಮಿಂಗ್ ಮಾಡಿ: ಯಾವ ಐಡಿಯಾಗಳು ಕೆಟ್ಟ ಐಡಿಯಾಗಳಲ್ಲ. ಒಂದು ವಿಷಯದ ಮೇಲೆ ನಿಮಗೆ ಬೇಕಿರುವ ಐಡಿಯಾಗಳನ್ನು ಬರೆಯಿರಿ. ಏನು ಮಾಡಬಹದು, ಯಾವ ರೀತಿ ಮಾಡಬಹುದು? ಎಷ್ಟು ದಾರಿ ಇದೆಯೋ ಎಲ್ಲವನ್ನೂ ಬರೆಯಿರಿ. ಒಂದು ದಾರಿ ಸಹಾಯವಾದೀತು.