5G ಅಪ್ಡೇಟ್ ಮಾಡ್ತೀವಿ ಎಂದು ನಿಮ್ಮ ಖಾತೆಗೆ ಹಾಕ್ತಾರೆ ಕನ್ನ: ಎಚ್ಚರ ವಹಿಸಲು ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೊಬೈಗಳಿಗೆ 5Gಗೆ ಅಪ್​ಡೇಟ್ ಮಾಡುತ್ತೇವೆ ಎಂದು ಕರೆ ಮಾಡಿ ಓಟಿಪಿ ಕೇಳುವವರ ಬಗ್ಗೆ ಎಚ್ಚರ ವಹಿಸಬೇಕಾಗಿದೆ ಎಂದು ಅಪರಾಧ ವಿಭಾಗದ ಡಿಸಿಪಿ ಡಾ.ಶರಣಪ್ಪ ಮನವಿ ಮಾಡಿದ್ದಾರೆ.

ಈಗಾಗಲೇ ಕೆಲವೊಂದು ಆಯ್ದಾ ನಗರದಲ್ಲಿ ಪ್ರಾಯೋಗಿಕವಾಗಿ 5G ನೆಟ್​ವರ್ಕ್ ಕೆಲಸ ಮಾಡುತ್ತಿದೆ. ಈ ಮಧ್ಯೆ ಜನ ಕೂಡ 4Gಯಿಂದ 5Gಗೆ ತಮ್ಮ ನೆಟ್​ವರ್ಕ್ ಅಪ್ಡೇಟ್ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಇದನ್ನೆ ಬಂಡವಾಳ‌ ಮಾಡಿಕೊಂಡಿರುವ ಸೈಬರ್ ಖದೀಮರು ಅಪ್​ಡೇಟ್ ಹೆಸರಲ್ಲಿ ಸುಲಿಗೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ. ಹೀಗಾಗಿ ಬಹಳ ಎಚ್ಚರಿಕೆಯಿಂದ ಇರಲು ಮನವಿ ಮಾಡಿದ್ದಾರೆ.

ಕಾಲ್​ ಸೆಂಟರ್​ಗಳಿಂದ ಕರೆ ಮಾಡುವ ಮೂಲಕ ಹೊಸ ವಂಚನೆಗೆ ಸಿದ್ಧವಾಗುತ್ತಿರುವ ವಂಚಕರ ಗ್ಯಾಂಗ್ ಏರ್​ಟೆಲ್, ಜಿಯೋ ಸೇರಿದಂತೆ ಹಲವು ನೆಟ್​ವರ್ಕ್​ಗಳಿಂದ ನಿಮ್ಮ ಸಿಮ್ ಅಪ್​ಡೇಟ್​ ಮಾಡುತ್ತೇವೆ ಎಂದು ಕರೆ ಮಾಡುತ್ತಾರೆ. ಕರೆ ಮಾಡಿ ನಿಮ್ಮ ನಂಬರ್ ಮತ್ತು ಮಾಹಿತಿ ಕೊಡಿ ಎಂದು ಹೇಳುವ ಈ ಗ್ಯಾಂಗ್ ಒಟಿಪಿ ಬರುತ್ತೆ ಅದನ್ನೆ ಹೇಳಿ ಅಂತಾರೆ. ಒಂದು ವೇಳೆ ಒಟಿಪಿ ಹೇಳಿದರೆ ಮುಗೀತು ಕ್ಷಣಾರ್ಧದಲ್ಲಿ ನಿಮ್ಮ ಖಾತೆಯಲ್ಲಿರುವ ಹಣವನ್ನು ದೋಚುತ್ತಾರೆ.

ಈ ಕಾರಣದಿಂದ ಸಿಸಿಬಿ ಮತ್ತು ಸೆನ್ ಪೊಲೀಸರು ಜಾಗೃತಿ ಮೂಡಿಸುತ್ತಿದ್ದು, ಯಾವುದೇ ಅಪ್​ಡೇಟ್ ಇದ್ದರೂ ಅದನ್ನು ಸಂಬಂಧಪಟ್ಟ ನೆಟ್​ವರ್ಕ್ ಕಚೇರಿಗಳಲ್ಲಿ ಮಾಡಿಸಿ, ಒಟಿಪಿ ಹೇಳಿ ಪೇಚಿಗೆ ಸಿಲುಕದಂತೆ ಮನವಿ ಮಾಡಿದ್ದಾರೆ. ಒಂದು ವೇಳೆ ಅಂತಹ ಕರೆ ಬಂದರೆ ಅಥವಾ ವಂಚನೆಯಾದರೆ ತಕ್ಷಣ 122ಗೆ ಕರೆ ಮಾಡುವಂತೆ ನಗರ ಅಪರಾಧ ವಿಭಾಗದ ಡಿಸಿಪಿ ಡಾ.ಶರಣಪ್ಪ ಮನವಿ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!