ಕ್ರಿಕೆಟ್ ಅಭಿಮಾನಿಗಳ ಮತ್ತೆ ಸಿಗಲಿದೆ ಟಿ20 ವಿಶ್ವಕಪ್ ಗೆಲುವಿನ ಸವಿನೆನಪು: ವೆಬ್ ಸೀರಿಸ್ ರೂಪದಲ್ಲಿ ಮ್ಯಾಚ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

1983ರ ವಿಶ್ವಕಪ್ ಬಳಿಕ ಅಸಂಖ್ಯಾತ ಕ್ರಿಕೆಟ್ ಅಭಿಮಾನಿಗಳ ಎಷ್ಟೋ ವರ್ಷದ ಕನಸದ ವಿಶ್ವಕಪ್ ಗೆಲುವನ್ನು 2007ರ ಟಿ20 ವಿಶ್ವಕಪ್ ಸಾಧಿಸಿ ನನಸಾಗಿಸಿದ ಕೀರ್ತಿ ಭಾರತೀಯ ಕ್ರೀಡಾಪಟುಗಳಿಗೆ ಸಲ್ಲುತ್ತದೆ.

ಈ ಪ್ರಶಸ್ತಿ ಗೆದ್ದು ಇಲ್ಲಿಗೆ 15 ವರ್ಷ ಕಳೆದಿದದ್ದರೂ ಭಾರತದ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯದ ಹೈಲೈಟ್ಸ್ ನೋಡುತ್ತಲೇ ಇರುತ್ತಾರೆ. ನೆನಪಿಸಿಕೊಳ್ಳುತ್ತಾರೆ.

ಇದೀಗ ಮತ್ತೊಮ್ಮೆ 2007 ರ ಟಿ20 ವಿಶ್ವಕಪ್​ ಅನ್ನು ವೆಬ್ ಸರಣಿಯ ಮೂಲಕ ನೋಡುವ ಅವಕಾಶ ಟೀಂ ಇಂಡಿಯಾ ಅಭಿಮಾನಿಗಳಿಗೆ ಬಂದೊದಗಿದೆ.

ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ ಗೆದ್ದ ಮೊದಲ ಟಿ20 ವಿಶ್ವಕಪ್ ಇದಾಗಿದೆ. ಈಗ ಓಟಿಟಿ ಪ್ಲಾಟ್‌ಫಾರ್ಮ್‌ನಲ್ಲಿ ಟಿ20 ವಿಶ್ವಕಪ್ ಬಗ್ಗೆ ವೆಬ್ ಸರಣಿಯನ್ನು ಮಾಡಲಾಗುತ್ತಿದೆ. ಈ ಸಾಕ್ಷ್ಯಚಿತ್ರ ಆಧಾರಿತ ಸರಣಿಯನ್ನು ಇಂಟರ್ನ್ಯಾಷನಲ್ ಪ್ರೊಡಕ್ಷನ್ ಹೌಸ್ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾಗುತ್ತಿದೆ.

ಟಿ20 ವಿಶ್ವಕಪ್‌ ಬಗ್ಗೆ ತಯಾರಾಗುತ್ತಿರುವ ಈ ವೆಬ್ ಸರಣಿಯ ಶೀರ್ಷಿಕೆ ಇನ್ನೂ ಅಂತಿಮಗೊಂಡಿಲ್ಲ. ಆದರೂ ಈ ಸೀರಿಸ್​ನಲ್ಲಿ ವಿಶ್ವಕಪ್‌ನಲ್ಲಿ ಭಾಗಿಯಾಗಿದ್ದ 15 ಆಟಗಾರರನ್ನು ಬಳಸಿಕೊಳ್ಳಲಾಗುವುದು. ಹಾಗೆಯೇ ಈ ವೆಬ್ ಸರಣಿಯಲ್ಲಿ ನೈಜ ದೃಶ್ಯಗಳನ್ನೂ ಸಹ ಬಳಸಿಕೊಳ್ಳಲಾಗುವುದು. ಈ ಸಾಕ್ಷ್ಯಚಿತ್ರ ಆಧಾರಿತ ವೆಬ್ ಸರಣಿಯ ಮೂರನೇ ಒಂದು ಭಾಗವನ್ನು ಚಿತ್ರೀಕರಿಸಲಾಗಿದ್ದು, ಈ ಸರಣಿಯ ಬಗ್ಗೆ ಅಧಿಕೃತವಾಗಿ ಘೋಷಣೆಯಾಗಿದೆ.

ಯುಕೆ ಮೂಲದ ಸಂಸ್ಥೆ ಒನ್ ಒನ್ ಸಿಕ್ಸ್ ನೆಟ್‌ವರ್ಕ್ 2007 ರ ಟಿ20 ವಿಶ್ವಕಪ್ ಆಧಾರಿತ ಈ ವೆಬ್ ಸೀರಿಸನ್ನು ನಿರ್ಮಿಸುತ್ತಿದೆ. ಇದು ಗೌರವ್ ಬಹಿರ್ವಾನಿ ಅವರ ಒಡೆತನದ ಕಂಪನಿಯಾಗಿದ್ದು, ಆನಂದ್ ಕುಮಾರ್ ಈ ವೆಬ್ ಸರಣಿಯನ್ನು ನಿರ್ದೇಶಿಸುತ್ತಿದ್ದಾರೆ.
ಈ ವೆಬ್ ಸರಣಿಯಗೆ ಚಿತ್ರಕಥೆ ಬರೆಯುತ್ತಿರುವ ಸೌರಭ್ ಎಂ ಪಾಂಡೆ ಅವರು ದಿ ಕಾಶ್ಮೀರ್ ಫೈಲ್ಸ್, ದಿ ತಾಷ್ಕೆಂಟ್ ಫೈಲ್ಸ್ ಮತ್ತು ವಾಣಿ ಮುಂತಾದ ಚಿತ್ರಗಳಿಗೆ ಚಿತ್ರ ಕಥೆಯನ್ನು ಬರೆದಿದ್ದಾರೆ.

ಭಾರತೀಯ ಕ್ರಿಕೆಟಿಗರ ಪಾತ್ರದಲ್ಲಿ ಹಲವು ದೊಡ್ಡ ತಾರೆಯರು ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸುದ್ದಿ ಪ್ರಕಾರ, ಈ ವೆಬ್ ಸರಣಿ 2023 ರಲ್ಲಿ ಬಿಡುಗಡೆಯಾಗಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!