ಡಿವೋರ್ಸ್‌ ವದಂತಿ ಕುರಿತು ಮೌನ ಮುರಿದ ಕ್ರಿಕೆಟಿಗ ಚಾಹಲ್‌!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಟೀಂ ಇಂಡಿಯಾದ ಆಟಗಾರ ಯಜುವೇಂದ್ರ ಚಾಹಲ್‌ ಅವರು ಪತ್ನಿ ಧನಶ್ರೀ ವರ್ಮಾಗೆ ಡಿವೋರ್ಸ್‌ ಕೊಡಲಿದ್ದಾರೆ ಎಂಬ ವದಂತಿ ಕುರಿತು ಕೊನೆಗೂ ಚಾಹಲ್‌ ಸಹ ಮೌನ ಮುರಿದಿದ್ದಾರೆ.

ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಚಾಹಲ್‌ ಊಹಾಪೋಹ ಹರಡದಂತೆ ಮನವಿ ಮಾಡಿದ್ದಾರೆ.

ನನ್ನ ಎಲ್ಲಾ ಅಭಿಮಾನಿಗಳ ಅಚಲ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಅವರಿಗೆ ಕೃತಜ್ಞನಾಗಿದ್ದೇನೆ. ಅಭಿಮಾನಿಗಳ ಬೆಂಬಲ ಇಲ್ಲದೇ ಇದ್ದಿದ್ದರೆ ನಾನು ಇಲ್ಲಿಯವರೆಗೆ ಬರುತ್ತಿರಲಿಲ್ಲ. ಆದ್ರೆ ಪ್ರಯಾಣ ಇಲ್ಲಿಗೇ ಮುಗಿಯುವುದಿಲ್ಲ. ಒಬ್ಬ ಕ್ರೀಡಾಪಟುವಾಗಿ ಇನ್ನೂ ನನ್ನ ದೇಶ, ನನ್ನ ತಂಡ ಹಾಗೂ ನನ್ನ ಎಲ್ಲ ಅಭಿಮಾನಿಗಳಿಗಾಗಿ ಅದ್ಭುತ ಓವರ್‌ಗಳು ಬಾಕಿ ಉಳಿದಿವೆ. ಆದ್ರೆ ಇತ್ತೀಚೆಗೆ ನಡೆಯುತ್ತಿರುವ ಘಟನೆಯನ್ನು ನಾನು ಅರ್ಥಮಾಡಿಕೊಂಡಿದ್ದೇನೆ. ಅದರಲ್ಲೂ ನನ್ನ ವೈಯಕ್ತಿಕ ಜೀವನದ ಬಗ್ಗೆ ಜಾಲತಾಣದಲ್ಲಿ ಕಾಮೆಂಟ್‌ಗಳು ಹರಿದಾಡುತ್ತಿವೆ. ಅದರಲ್ಲಿ ಸತ್ಯವಾಗಿರಬಹುದಾದ ಮತ್ತು ಸತ್ಯವಲ್ಲದ ವಿಷಯಗಳ ವದಂತಿ ಹರಿದಾಡುತ್ತಿರುವುದನ್ನು ನಾನು ಗಮನಿಸಿದ್ದೇನೆ.

ನಾನು ಒಬ್ಬ ಮಗ, ಸಹೋದರ ಹಾಗೂ ಸ್ನೇಹಿತನಾಗಿ ನಿಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ. ಯಾರೂ ಊಹಾಪೋಹಗಳಲ್ಲಿ ತೊಡಗಬೇಡಿ. ಇಂತಹ ಊಹಾಪೋಹಳಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ತುಂಬಾನೆ ನೋವಾಗಿದೆ. ನನ್ನ ಕುಟುಂಬ ಎಲ್ಲರಿಗೂ ಒಳ್ಳೆಯದನ್ನೇ ಬಯಸಲು ಕಲಿಸಿದೆ, ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸುವುದನ್ನೇ ಕಲಿಸಿದೆ. ಹಾಗಾಗಿ ಜೀವನದಲ್ಲಿ ಅಡ್ಡದಾರಿಯಲ್ಲಿ ಸಾಗುವ ಬದಲು ನಾನು ನನ್ನ ಮೌಲ್ಯಗಳಿಗೆ ಬದ್ಧನಾಗಿರುತ್ತೇನೆ. ದೇವರ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲ ಪಡೆಯಲು ನಾನು ಶಾಶ್ವತವಾಗಿ ಶ್ರಮಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಧನಶ್ರೀ ವರ್ಮಾ ಹೇಳಿದ್ದೇನು?
ಇನ್ನು ಕುರಿತು ಧನಶ್ರೀಕೂಡ ಪೋಸ್ಟ್ ಮಾಡಿದ್ದರು. ನಾನು, ನನ್ನ ಕುಟುಂಬದ ಸದಸ್ಯರು ಕಳೆದ ಕೆಲ ದಿನಗಳಿಂದ ಕಠಿಣ ಪರಿಸ್ಥಿತಿ ಎದುರಿಸುತ್ತಿದ್ದೇವೆ. ಕೆಲವರು ಸತ್ಯ ತಿಳಿಯದೇ ಸುಳ್ಳು ಸುಳ್ಳನ್ನೇ ಬರೆಯುತ್ತಿದ್ದಾರೆ. ನನ್ನ ಖ್ಯಾತಿಗೆ ಕಳಂಕ ತರಲು ಆಧಾರರಹಿತ ಬರವಣಿಗೆ, ಸತ್ಯ-ಪರಿಶೋಧವಿಲ್ಲದ ಬರಹಗಳು ಮತ್ತು ದ್ವೇಷ ಹರಡುವ ಟ್ರೋಲ್‌ಗಳನ್ನು ಮಾಡುತ್ತಿದ್ದಾರೆ. ಹಲವು ವರ್ಷಗಳ ಕಾಲ ಶ್ರಮಿಸಿದ ನಂತರವೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ನಾನು ಮೌನವಾಗಿದ್ದ ಮಾತ್ರಕ್ಕೆ, ಅದು ನನ್ನ ದೌರ್ಬಲ್ಯ ಎಂದು ಭಾವಿಸಬೇಡಿ ಎಂದಿದ್ದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!