ಕ್ರಿಕೆಟಿಗ ಶಮಿ ದಾಂಪತ್ಯ ಬಿರುಕು: ಪತ್ನಿಗೆ ತಿಂಗಳು 50 ಸಾವಿರ ರೂ. ನೀಡುವಂತೆ ಕೋರ್ಟ್ ಆದೇಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಟೀಮ್ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಹಾಗೂ ಪತ್ನಿ ಹಸಿನ್ ಜಹಾನ್ ನಡುವಣ 5 ವರ್ಷಗಳ ಕಾನೂನು ಹೋರಾಟದಲ್ಲಿ ಅಲಿಪುರ ಜಿಲ್ಲಾ ನ್ಯಾಯಾಲಯವು ಪತ್ನಿ ಹಸಿನ್ ಜಹಾನ್ ಪರವಾಗಿ ಮಹತ್ವದ ತೀರ್ಪು ನೀಡಿದೆ.

16 ಆಗಸ್ಟ್ 2018 ರಂದು, ಹಸಿನ್ ಜಹಾನ್ ಪತ್ನಿ ಮೊಹಮ್ಮದ್ ಶಮಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಅಲ್ಲದೆ ಹಲ್ಲೆ, ಅತ್ಯಾಚಾರ, ಕೊಲೆ ಯತ್ನ ಮತ್ತು ಕೌಟುಂಬಿಕ ಹಿಂಸಾಚಾರದ ಆರೋಪದಡಿಯಲ್ಲಿ ಟೀಮ್ ಇಂಡಿಯಾ ಕ್ರಿಕೆಟಿಗ ಮೇಲೆ ಪ್ರಕರಣ ದಾಖಲಿಸಲಾಗಿತ್ತು. ಮಗಳ ಖರ್ಚಿಗೆ ಹಾಗೂ ತನಗೆ ಯಾವುದೇ ರೀತಿಯ ಹಣಕಾಸಿನ ನೆರವು ನೀಡುತ್ತಿಲ್ಲ ಎಂದು ಹಸಿನ್ ಜಹಾನ್ ದೂರಿನಲ್ಲಿ ಅಪಾದಿಸಿದ್ದರು.ಮಾಸಿಕ 10 ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದರು.

ಇದೀಗ ಈ ಬಗ್ಗೆ ತೀರ್ಪು ನೀಡಿರುವ ನ್ಯಾಯಾಲಯವು, ಮೊಹಮ್ಮದ್ ಶಮಿ ಅವರಿಗೆ ಪ್ರತಿ ತಿಂಗಳು 50 ಸಾವಿರ ರೂ. ನೀಡಬೇಕೆಂದು ಸೂಚಿಸಿದೆ.
ಮೊಹಮ್ಮದ್ ಶಮಿ ಅವರ ವಾರ್ಷಿಕ ಆದಾಯ ಆದಾಯ ತೆರಿಗೆ 7.19 ಕೋಟಿ ರೂ. ಇದನ್ನು ಪರಿಗಣಿಸಿ ಪ್ರತಿ ತಿಂಗಳು 10ನೇ ತಾರೀಖಿನಂದು 50 ಸಾವಿರ ರೂ. ಪಾವತಿಗೆ ಕೋರ್ಟ್​ ಆದೇಶಿಸಿದೆ. ಆದ್ರೆ ಹಸಿನ್ ಜಹಾನ್ ಅವರ ಮಾಸಿಕ 10 ಲಕ್ಷ ರೂ. ಬೇಡಿಕೆಯನ್ನು ತಿರಸ್ಕರಿಸಿದ್ದಾರೆ.

2014 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟಿದ್ದ ಮೊಹಮ್ಮದ್ ಶಮಿ ಹಾಗೂ ಹಸಿನ್ ಜಹಾನ್​ಗೆ ಒಬ್ಬಳು ಮಗಳಿದ್ದಾಳೆ. ವಿಶೇಷ ಎಂದರೆ ಅದಾಗಲೇ ಮದುವೆಯಾಗಿ ಡೈವೋರ್ಸ್ ಪಡೆದಿದ್ದ ಹಸಿನ್ ಜಹಾನ್ ಅವರನ್ನು ಶಮಿ ವಿವಾಹವಾಗಿದ್ದರು. ಆದರೆ ಹೊಸ ಜೀವನ ಆರಂಭಿಸಿದ್ದ ಈ ಜೋಡಿ ನಡುವೆ ಬಿರುಕುಂಟಾಗಿತ್ತು.

ಇನ್ನು ಪತ್ನಿ ಮಾಡಿರುವ ಎಲ್ಲಾ ಆರೋಪಗಳನ್ನು ಮೊಹಮ್ಮದ್ ಶಮಿ ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಸದ್ಯ ಪತ್ಯೇಕವಾಗಿ ವಾಸಿಸುತ್ತಿರುವ ಈ ಜೋಡಿಯು ಇನ್ನೂ ಕೂಡ ವಿಚ್ಛೇದನ ಪಡೆದಿಲ್ಲ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!