spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡ ಕ್ರಿಕೆಟಿಗ ಸುರೇಶ್ ರೈನಾ!

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಟೀಮ್ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ಇದೀಗ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಹೌದು, ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಸ್ಟಾರ್ ಆಟಗಾರನಾಗಿರುವ ರೈನಾ ಕೆಲ ದಿನಗಳ ಹಿಂದೆ ತಮಿಳುನಾಡು ಪ್ರೀಮಿಯರ್ ಲೀಗ್ ಕಾಮೆಂಟರಿ ಚಿಟ್​ಚಾಟ್​ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಕಮೆಂಟೇಟರ್ ಚೆನ್ನೈ ಸಂಸ್ಕೃತಿ ಕುರಿತಾದ ಪ್ರಶ್ನೆಗಳನ್ನು ಕೇಳಿದ್ದರು.
ನೀವು ಚೆನ್ನೈನ ಪಂಚೆ, ನೃತ್ಯ ಹಾಗೂ ಶಿಳ್ಳೆ ಸಂಸ್ಕೃತಿಗೆ ಹೇಗೆ ಒಗ್ಗಿಕೊಂಡಿದ್ದೀರಿ ಎಂದು ವೀಕ್ಷಕ ವಿವರಣೆಗಾರ ಕೇಳಿದ್ದರು. ಈ ಪ್ರಶ್ನೆಗೆ ಉತ್ತರಿಸಿದ ರೈನಾ, ನಾನು ಕೂಡ ಬ್ರಾಹ್ಮಣ. 2004 ರಿಂದ ಚೆನ್ನೈನಲ್ಲಿ ಆಡುತ್ತಿದ್ದೇನೆ. ನಾನು ಸಹ ತಮಿಳು ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ನನ್ನ ಸಹ ಆಟಗಾರರನ್ನು ಹೆಚ್ಚು ಇಷ್ಟಪಡುತ್ತೇನೆ. ತಮಿಳುನಾಡು ಕ್ರಿಕೆಟಿಗರಾದ ಬಾಲಾಜಿ, ಅನಿರುದ್ಧ್ ಶ್ರೀಕಾಂತ್, ಬದರಿನಾಥ್ ಮುಂತಾದವರ ಜೊತೆ ಆಡಿದ್ದೇನೆ. ಸಿಎಸ್‌ಕೆ ತಂಡದ ಭಾಗವಾಗಿರುವುದು ನನ್ನ ಅದೃಷ್ಟ ಎಂದು ಸುರೇಶ್ ರೈನಾ ತಿಳಿಸಿದ್ದರು.
ಆದರೆ ಈ ಹೇಳಿಕೆಗೆ ಅಪಸ್ವರ ಶುರುವಾಗಿದ್ದು, ಚೆನ್ನೈ ಸಂಸ್ಕೃತಿ ಎಂಬುದು ಬ್ರಾಹ್ಮಣರು ಅಲ್ಲ. ಅಷ್ಟೇ ಅಲ್ಲದೆ ಒಂದು ಪ್ರದೇಶದ ಸಂಸ್ಕೃತಿ ಬಗ್ಗೆ ಕೇಳಿದಾಗ ಜಾತಿಯನ್ನು ಪ್ರಸ್ತಾಪಿಸಿದ್ದರ ವಿರುದ್ದ ಸೋಷಿಯಲ್ ಮೀಡಿಯಾದಲ್ಲಿ ರೈನಾ ವಿರುದ್ದ ಆಕ್ರೋಶಗಳು ವ್ಯಕ್ತವಾಗುತ್ತಿದೆ.
ರೈನಾ ಅವರ ಹೇಳಿಕೆಯನ್ನು ಇದೀಗ ಸಿಎಸ್​ಕೆ ತಂಡದ ಕೆಲ ಅಭಿಮಾನಿಗಳೇ ಟ್ರೋಲ್ ಮಾಡುತ್ತಿದ್ದು, ಕ್ರಿಕೆಟ್​ ವಿಷಯದಲ್ಲೂ ಜಾತಿಯನ್ನು ಎಳೆದು ತರುತ್ತಿದ್ದೀರಿ ಎಂದು ರೈನಾ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss