Tuesday, June 28, 2022

Latest Posts

ತಾಯಿಯ ಸಾವಿನ ದುಃಖ ಮಾಸುವ ಮುನ್ನವೇ ಕ್ರಿಕೆಟರ್ ವೇದಾ ಕೃಷ್ಣಮೂರ್ತಿಗೆ ಮತ್ತೊಂದು ಶಾಕ್: ಕೊರೋನಾಗೆ ಸಹೋದರಿ ಬಲಿ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕ್ರಿಕೆಟ್ ಆಟಗಾರ್ತಿ ವೇದಾ ಕೃಷ್ಣಮೂರ್ತಿ ಅವರ ಸಹೋದರಿ ಕೊರೋನಾ ಸೋಂಕಿಗೆ ಮೃತಪಟ್ಟಿದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ವೇದಾ ಅವರ ತಾಯಿ ಸೋಂಕಿನಿಂದ ಮೃತಪಟ್ಟಿದ್ದರು.
ವೇದಾ ಕೃಷ್ಣಮೂರ್ತಿ ಅವರ ಕುಟುಂಬಿಕರಿಗೆ ಕೆಲವು ದಿನಗಳ ಹಿಂದೆ ಸೋಂಕು ದೃಢವಾಗಿತ್ತು. ಇಂದು ಚಿಕ್ಕಮಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿ ವೇದಾ ಅವರ ಸಹೋದರಿ, ಕಡೂರು ಪಟ್ಟಣದ ವತ್ಸಲಾ (40 ವ) ಸಾವನ್ನಪ್ಪಿದ್ದಾರೆ.
10 ದಿನದ ಅಂತರದಲ್ಲಿ ವೇದಾ ತಾಯಿ-ಸಹೋದರಿ ಕೋವಿಡ್ 19 ಸೋಂಕಿಗೆ ಬಲಿಯಾಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss