ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೀಂ ಇಂಡಿಯಾ ಕ್ರಿಕೆಟರ್ ವಾಶಿಂಗ್ಟನ್ ಸುಂದರ್ ಅವರ ಅಧಿಕೃತ ಟ್ವಿಟರ್ ಖಾತೆ ಹ್ಯಾಕ್ ಆಗಿದೆ.
ಇಂದು ಬೆಳಗ್ಗೆ ಅಕೌಂಟ್ ಹ್ಯಾಕ್ ಆಗಿದ್ದು, ಕ್ರಿಪ್ಟೋ ಕರೆನ್ಸಿ ಬಗೆಗಿನ ಮಾಹಿತಿ ಹಂಚಿಕೊಳ್ಳಲಾಗಿದೆ. ಜೊತೆಗೆ ಲಿಂಕ್ ಒತ್ತುವಂತೆ ಹೇಳಲಾಗಿದೆ.
ಬೆಳಗ್ಗೆಯಿಂದ ಮೂರು ಪೋಸ್ಟ್ಗಳನ್ನು ಹ್ಯಾಕರ್ಸ್ ಪೋಸ್ಟ್ ಮಾಡಿದ್ದಾರೆ. ಎಲ್ಲವೂ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದ್ದಾಗಿದೆ. ಇದೀಗ ಖಾತೆ ಹ್ಯಾಕ್ ಆಗಿದ್ದು ತಿಳಿದ ಕಾರಣ ಟ್ವಿಟರ್ ಪೋಸ್ಟ್ಗಳ ಮೇಲಿನ ಕಮೆಂಟ್ಗಳನ್ನು ನಿರ್ಬಂಧಿಸಿದೆ.