ಪ.ಬಂಗಾಳ: ಬಿರ್ಭೂಮ್ ನ ಆಟದ ಮೈದಾನದ ಬಳಿ ಕಚ್ಚಾ ಬಾಂಬ್‌ಗಳು ಪತ್ತೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಸಿಕಂದರ್ ಗ್ರಾಮದ ಫುಟ್ಬಾಲ್ ಮೈದಾನದ ಬಳಿ ಪ್ಲಾಸ್ಟಿಕ್ ಚೀಲದಲ್ಲಿ ಇರಿಸಲಾಗಿದ್ದ ಸಜೀವ ಕಚ್ಚಾ ಬಾಂಬ್‌ಗಳನ್ನು ಪೊಲೀಸರು ಭಾನುವಾರ ವಶಕ್ಕೆ ಪಡೆದಿದ್ದಾರೆ. ಕೇಂದ್ರೀಯ ತನಿಖಾ ಇಲಾಖೆಯ ಬಾಂಬ್ ಸ್ಕ್ವಾಡ್ ತಂಡವು ಈ ಬಾಂಬ್‌ ಗಳನ್ನು ನಿಷ್ಕ್ರಿಯಗೊಳಿಸಿದೆ ಎಂದು ಎಎನ್‌ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಿರಬೂಮ್‌ ಹತ್ಯಾಕಾಂಡದ ತನಿಖೆಗೆ ಸಿಬಿಐ ತಂಡವು ಆಗಮಿಸಿರುವ ಸಮಯದಲ್ಲಿಯೇ ಕಚ್ಚಾ ಬಾಂಬ್‌ ಗಳು ಪತ್ತೆಯಾಗಿವೆ.
ಬಿರ್ಭೂಮ್ ಹಿಂಸಾಚಾರದ ನಂತರ ಪ.ಬಂಗಾಳ ಪೊಲೀಸರು ಅಕ್ರಮ ಶಸ್ತ್ರಾಸ್ತ್ರಗಳ ವಶಕ್ಕೆ ರಾಜದ ಎಲ್ಲೆಡೆ ದಾಳಿ ನಡೆಸುತ್ತಿದ್ದಾರೆ. ಜಗದ್ದಲ್, ಬಿಜ್‌ಪುರ ಮತ್ತು ಭಟ್ಪಾರಾ ಪ್ರದೇಶಗಳಲ್ಲಿಯೂ ಸಹ ಎಂಟು ಸಜೀವ ಬಾಂಬ್‌ಗಳು, ಮೂರು ಬಂದೂಕುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
ಸಿಬಿಐ ಅಧಿಕಾರಿಗಳು ಹಿಂಸಾಚಾರ ನಡೆದ ಸ್ಥಳದಲ್ಲಿ ತೀವ್ರ ತನಿಖೆ ನಡೆಸುತ್ತಿದ್ದಾರೆ. ರಾಮ್‌ಪುರಹತ್ ಗ್ರಾಮದಲ್ಲಿ ಹಿಂಸಾಚಾರದ ವೇಳೆ ಸುಟ್ಟು ಕರಕಲಾದ ಅವಶೇಷಗಳ ಮಾದರಿಗಳನ್ನು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ತಂಡ ಭಾನುವಾರ ಸಂಗ್ರಹಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!