Wednesday, July 6, 2022

Latest Posts

ಕರ್ಫ್ಯೂ ಉಲ್ಲಂಘನೆ: 300ಕ್ಕೂ ಹೆಚ್ಚು ವಾಹನಗಳನ್ನು ಸೀಜ್ ಮಾಡಿದ ಪೊಲೀಸರು

ಹೊಸ ದಿಗಂತ ವರದಿ, ಮೈಸೂರು:

ಮಹಾಮಾರಿ ಕೊರೋನಾ ಸೋಂಕು ಹರಡುವಿಕೆಯ ಚೈನ್ ಲಿಂಕ್ ಕಟ್ ಮಾಡಿ, ಅದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಮೇ 12 ರತನಕ ಜನತಾ ಕರ್ಫೂ್ಯ ಜಾರಿಗೊಳಿಸಿದ್ದರೂ ಅದನ್ನು ಉಲ್ಲಂಘಿಸಿದ 300ಕ್ಕೂ ಹೆಚ್ಚು ವಾಹನಗಳನ್ನು ಪೊಲೀಸರು ಒಂದೇ ದಿನದಲ್ಲಿ ಸೀಜ್ ಮಾಡಿದ್ದಾರೆ.
ಮೈಸೂರು ನಗರದಲ್ಲಿ ಕರ್ಫ್ಯೂ ಜಾರಿಯಲ್ಲಿದ್ದರೂ ಪ್ರತಿ ನಿತ್ಯ ಬೆಳಿಗ್ಗೆ 6ರಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. ನಂತರ ಎಲ್ಲವೂ ಬಂದ್ ಆಗಬೇಕು. ಆದರೆ ಮೈಸೂರಿನಲ್ಲಿ ಐಡಿ ಕಾರ್ಡ್, ಮೆಡಿಕಲ್ ಚೀಟಿ ಹಿಡಿದು ಜನರು ಹೊರಗೆ ಬರುತ್ತಿದ್ದು, ಮಾರ್ಕೆಟ್‌ಗೆ ಬಂದೆ, ಇಂಜೆಕ್ಷನ್‌ಗೆ ಬಂದೆ ಎಂದು ಕುಂಟು ನೆಪ ಹೇಳಿತ್ತಿರುವವರಿಗೆ ಇದೀಗ ಪೊಲೀಸರು ಶಾಕ್ ನೀಡಿದ್ದಾರೆ.
ಅನಗತ್ಯವಾಗಿ ಓಡಾಡುತ್ತಿದ್ದ ಹಿನ್ನೆಲೆ ಒಂದೇ ದಿನ ಮೈಸೂರು ನಗರ ಪೊಲೀಸರು 248 ದ್ವಿ ಚಕ್ರ ವಾಹನಗಳು, 4 ಆಟೋ ರಿಕ್ಷಾ, 1 ಗೂಡ್ಸ್ ಆಟೋ, 28 ಕಾರುಗಳು ಸೇರಿದಂತೆ 300ಕ್ಕೂ ಹೆಚ್ಚು ವಾಹನ ಸೀಜ್ ಮಾಡಿದ್ದಾರೆ. ಅಲ್ಲದೇ ನಗರದಾದ್ಯಂತ ಎಲ್ಲ ಮುಖ್ಯ ರಸ್ತೆ ಬಂದ್ ಮಾಡಿದ್ದಾರೆ. ಹೀಗಾಗಿ ಕೆ.ಆರ್. ಆಸ್ಪತ್ರೆಯ ಆಯುರ್ವೇದಿಕ್ ಸರ್ಕಲ್ ಮೂಲಕವೇ ಸಂಚಾರಕ್ಕೆ ಅವಕಾಶ ನೀಡಲಾಗಿದೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ನಗರದಲ್ಲಿ ಎಮರ್ಜೆನ್ಸಿಗಾಗಿ ವಾಹನ ಸಂಚಾರ ಆಗ್ತಿದೆ. ಕೆಲವರು ಅನಗತ್ಯವಾಗಿ ಹೊರಗೆ ಬರ್ತಿದ್ದಾರೆ. ಅಂತವರ ವಾಹನವನ್ನ ಈಗಾಗಲೇ ಸೀಜ್ ಮಾಡಿದ್ದೇವೆ. ಅನಗತ್ಯವಾಗಿ ಹೊರಗೆ ಬಾರದಂತೆ ಸೂಚನೆ ಕೊಟ್ಟಿದ್ದೇವೆ. ಆದರೂ ಬಂದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು. ಬಹುತೇಕ ಎಲ್ಲಾ ಕಡೆ ಕರ್ಪೂ್ಯ ಚೆನ್ನಾಗಿಯೇ ಇದೆ. ನಾವು ಪ್ರಮುಖ ರಸ್ತೆ ಬಂದ್ ಮಾಡಿದ್ದೇವೆ. ತೀರ ಅವಶ್ಯಕತೆ ಇರೋರು, ವಿನಾಯಿತಿ ಇರುವ ಸೆಕ್ಟರ್ ಗಳ ಸಿಬ್ಬಂದಿ ಓಡಾಟ ಇದೆ. ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ, ಅನಾವಶ್ಯಕವಾಗಿ ಓಡಾಡುವ ಸಾರ್ವಜನಿಕರ ವಾಹನಗಳು ಕಂಡು ಬಂದಲ್ಲಿ ವಾಹನಗಳನ್ನು ವಶಪಡಿಸಿಕೊಂಡು, ಸಂಬAಧಪಟ್ಟವರ ವಿರುದ್ದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss