ಕುತೂಹಲ ಕೆರಳಿಸಿದೆ ಲಂಕಾ ಚುನಾವಣೆ: ದ್ವೀಪ ರಾಷ್ಟ್ರಕ್ಕೆ ಯಾರಾಗಲಿದ್ದಾರೆ ಸಾರಥಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ ವಿರುದ್ಧದ ಪ್ರತಿಭಟನೆಗಳ ನಡುವೆ ನೂತನ ಅಧ್ಯಕ್ಷರ ಆಯ್ಕೆಗಾಗಿ ಇಂದು ಚುನಾವಣೆ ನಡೆಯಲಿದೆ. ಗೋಟಬಾಯಾ ರಾಜಪಕ್ಸೆ ರಾಜಿನಾಮೆ ನಂತರ ರನಿಲ್‌ ವಿಕ್ರಮಸಿಂಘೇ ಹಂಗಾಮಿ ಅಧ್ಯಕ್ಷರಾಗಿದ್ದರು.

ಶ್ರೀಲಂಕಾದ ಒಂಬತ್ತನೇ ಅಧ್ಯಕ್ಷರಾಗಲು ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮತ್ತು ಸಂಸದರಾದ ಡಲ್ಲಾಸ್ ಅಲಹಪ್ಪೆರುಮಾ ಮತ್ತು ಅನುರ ಕುಮಾರ ಡಿಸಾನಾಯಕೆ ನಿನ್ನೆ ತಮ್ಮ ನಾಮನಿರ್ದೇಶನಗಳನ್ನು ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರು ನಾಮಪತ್ರ ಹಿಂಪಡೆದಿದ್ದರು.

ಪ್ರತಿಭಟನೆಯ ನಡುವೆ ಜುಲೈ 13 ರಂದು ದೇಶದಿಂದ ಪಲಾಯನ ಮಾಡಿದ ರಾಜಪಕ್ಸೆ ಜುಲೈ 14 ರಂದು ತಡವಾಗಿ ತಮ್ಮ ರಾಜೀನಾಮೆಯನ್ನು ಕಳುಹಿಸಿದರು, ಇದನ್ನು ಜುಲೈ 15 ರಂದು ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಅವರು ಅಂಗೀಕರಿಸಿದರು.

ಅದೇ ದಿನ, ರಾಜಪಕ್ಸೆಯಿಂದ ಆಯ್ಕೆಯಾದ ರಾನಿಲ್ ವಿಕ್ರಮಸಿಂಘೆ ಅವರು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಪ್ರಸ್ತುತ ಇಂದು ಅಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯಲಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!