ಅಮದಿಗೆ ಹಣವಿಲ್ಲ; ಚಹಾ ಕಡಿಮೆ ಕುಡಿಯುವಂತೆ ಜನರನ್ನು ಕೋರಿಕೊಂಡ ಪಾಕ್‌ ಸರ್ಕಾರ!

ಹೊಸದಿಗಂತ ಡಜಿಟಲ್‌ ಡೆಸ್ಕ್‌ 
ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನರು ಹೈರಾಣಾಗಿದ್ದಾರೆ. ಈ ನಡುವೆ ಚಹಾ ಅಮದಿಗೆ ನಮ್ಮ ಬಳಿ ಹಣವಿಲ್ಲ, ಚಹಾ ಬಳಕೆಗೆ ಕಡಿವಾಣ ಹಾಕುವಂತೆ ಸರ್ಕಾರ ಜನರಲ್ಲಿ ಮನವಿ ಮಾಡಿಕೊಂಡಿದೆ.
ಪಾಕಿಸ್ತಾನವು ಸಾಲ ಪಡೆದು ಚಹಾವನ್ನು ಆಮದು ಮಾಡಿಕೊಳ್ಳುತ್ತಿದ್ದು, ಆಮದು ವೆಚ್ಚವನ್ನು ಕಡಿಮೆ ಮಾಡಲು ಪ್ರತಿದಿನ ಒಂದು ಅಥವಾ ಎರಡು ಕಪ್ ಚಹಾ ಸೇವನೆಯನ್ನು ಕಡಿಮೆ ಮಾಡಿ ಎಂದು ಪಾಕಿಸ್ತಾನದ ಯೋಜನೆ ಮತ್ತು ಅಭಿವೃದ್ಧಿ ಸಚಿವ ಅಹ್ಸಾನ್ ಇಕ್ಬಾಲ್ ಅವರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ವಿಶ್ವದ ಅತಿ ದೊಡ್ಡ ಚಹಾ ಆಮದುದಾರ ಪಾಕಿಸ್ತಾನ, ಅದನ್ನು ಆಮದು ಮಾಡಿಕೊಳ್ಳಲು ಸಾಲ ಮಾಡಬೇಕಾಗಿದೆ ಎಂದು ಅವರು ಹೇಳಿದ್ದಾರೆ. ವಿದೇಶಿ ವಿನಿಮಯವನ್ನು ಉಳಿಸುವ ಪ್ರಯತ್ನದ ಭಾಗವಾಗಿ ಕಳೆದ ತಿಂಗಳು ಪಾಕ್‌  ಸರ್ಕಾರವು ಐಷಾರಾಮಿ ವಸ್ತುಗಳ ಆಮದನ್ನು ನಿರ್ಬಂಧಿಸಿತ್ತು.
ಆದರೆ ಟೀ ಸೇವನೆಯನ್ನು ಒಂದರಿಂದ ಎರಡು ಕಪ್‌ಗಳಷ್ಟು ಕಡಿಮೆ ಮಾಡುವಂತೆ ಮಾಡಿಕೊಳ್ಳಲಾದ ಮನವಿಯು ಪಾಕ್ ಜನರಿಗೆ ಇರಿಸುಮುರಿಸು ತಂದಿದ್ದು, ಸಾಮಾಜಿಕ ಮಾಧ್ಯಮದಲ್ಲಿ ಸರ್ಕಾರವನ್ನು ಹಿಗ್ಗಾಮುಗ್ಗಾ ಟೀಕಿಸಲಾಗುತ್ತಿದೆ. ನಾವು ಚಹಾ ಸೇವನೆಯನ್ನು ತ್ಯಜಿಸಲ್ಲ ಎಂದು ಬಹುತೇಕ ಬಳಕೆದಾರರು ಹೇಳಿದ್ದಾರೆ.
ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳದಿದ್ದರೆ ಪಾಕಿಸ್ತಾನದ ಆರ್ಥಿಕತೆಯು ಶ್ರೀಲಂಕಾದಂತೆಯೇ ಆಗುತ್ತದೆ ಎಂದು ಇತ್ತೀಚೆಗೆ ಹಣಕಾಸು ಸಚಿವ ಮಿಫ್ತಾ ಇಸ್ಮಾಯಿಲ್ ಎಚ್ಚರಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!