ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೈಬರ್ ವಂಚನೆ ಸಂಬಂಧಿತ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ನಡೆಸುತ್ತಿರುವಾಗ ಜಾರಿ ನಿರ್ದೇಶನಾಲಯದ ತಂಡದ ಮೇಲೆಹಲ್ಲೆ ನಡೆದ ಘಟನೆ ದೆಹಲಿಯ ಬಿಜ್ವಾಸನ್ ಪ್ರದೇಶದಲ್ಲಿ ನಡೆದಿದೆ.
ಏಜೆನ್ಸಿಯ ಹೈ-ಇಂಟೆನ್ಸಿಟಿ ಯೂನಿಟ್ (HIU) ನ ಭಾಗವಾಗಿರುವ ED ತಂಡವು ಸೈಬರ್ ಅಪ್ಲಿಕೇಶನ್ ವಂಚನೆ (Cyber Fraud Case) ಪ್ರಕರಣದ ತನಿಖೆಗೆ ಸಂಬಂಧಿಸಿದ ಶೋಧಕ್ಕೆ ತೆರಳಿತ್ತು. ಈ ವೇಳೆ ಅಶೋಕ್ ಶರ್ಮಾ ಮತ್ತು ಆತನ ಸಹೋದರ ಹಾಗೂ ಕುಟುಂಬದ ಸದಸ್ಯರು ಸೇರಿಕೊಂಡು ತಂಡದ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಇಡಿ ಸಹಾಯಕ ನಿರ್ದೇಶಕರಿಗೆ ಗಾಯಗಳಾಗಿವೆ.
ಗಲಾಟೆ ಹೆಚ್ಚಾಗುತ್ತಿದ್ದಂತೆ ಸ್ಥಳೀಯ ಪೊಲೀಸರನ್ನು ತಕ್ಷಣವೇ ಸ್ಥಳಕ್ಕೆ ಕರೆಸಲಾಗಿದೆ. ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಪರಾರಿಯಾದ ಆರೋಪಿಗಳ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.
ಈ ದಾಳಿಗಳು ಫಿಶಿಂಗ್ ಹಗರಣ, ಕ್ಯೂಆರ್ ಕೋಡ್ ವಂಚನೆ ಮತ್ತು ಅರೆಕಾಲಿಕ ಉದ್ಯೋಗ ಹಗರಣ ಹಾಗೂ ಸಾವಿರಾರು ಸೈಬರ್ ಅಪರಾಧಗಳು ಸೇರಿದಂತೆ ಅಕ್ರಮ ಮನಿ ಲಾಂಡರಿಂಗ್ ಪ್ರಕರಣಗಳಿಗೆ ಸಂಬಂಧಿಸಿದ್ದಾಗಿದೆ.