Monday, August 8, 2022

Latest Posts

ಸೈಬರ್, ಮಾದಕ ದ್ರವ್ಯ ಅಪರಾಧ ಠಾಣೆಯ ಪೊಲೀಸರ ದಾಳಿ : 5 ಲಕ್ಷ ಮೌಲ್ಯದ ಮದ್ಯ ವಶ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಕೋಲಾರ:

ಖಚಿತ ಮಾಹಿತಿಯ ಮೇರೆಗೆ ಮುಳಬಾಗಿಲು ತಾಲೂಕಿನ ಲಕ್ಕದೊಡ್ಡಿಯ ತೋಟದ ಮನೆಯ ಮೇಲೆ ದಾಳಿ ನಡೆಸಿದ ಕೋಲಾರದ ಸೈಬರ್, ಆರ್ಥಿಕ ಮತ್ತು ಮಾದಕ ದ್ರವ್ಯ ಅಪರಾಧ ಠಾಣೆ ಪೊಲೀಸರು ಅಕ್ರಮವಾಗಿ ಸಂಗ್ರಹಿಸಿದ್ದ 5 ಲಕ್ಷರೂ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಮುಳಬಾಗಿಲು ತಾಲೂಕು ಬೈರಕೂರಿನ ಶಿವ ವೈನ್ಸ್‌ಗೆ ಸೇರಿದ ಮದ್ಯದ ಬಾಟಲಿಗಳನ್ನು ಮಾಲೀಕ ಕೃಷ್ಣಪ್ಪ ತೋಟದ ಮನೆಯಲ್ಲಿ ಅಕ್ರಮವಾಗಿ ಸಂಗ್ರಹಿಸಲಾಗಿತ್ತು. ಅಲ್ಲದೆ ಬಾಟಲ್‌ಗಳ ಮೇಲಿನ ಲೇಬಲ್‌ಗಳನ್ನು ತೆಗೆದು ಆಂಧ್ರಪ್ರದೇಶಕ್ಕೆ ಕಳುಹಿಸುವುದಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿತ್ತು.
ಈ ಬಗ್ಗೆ ಸೈಬರ್ ಸಿಪಿಐ ಎಸ್.ಆರ್.ಜಗದೀಶ್‌ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬೆಳಗ್ಗೆ 7 ಗಂಟೆಗೆ ಸ್ಥಳಕ್ಕೆ ತೆರಳಿದ್ದು, 130 ಬಾಕ್ಸ್‌ಗಳಲ್ಲಿನ ಸುಮಾರು 5 ಲಕ್ಷರೂ ಮೌಲ್ಯದ 1250 ಲೀಟರ್ ಅಕ್ರಮ ಮದ್ಯ ಹಾಗೂ ಶಿವ ವೈನ್ಸ್‌ನ ಸಿಬ್ಬಂದಿ ಕುರುಬರಹಳ್ಳಿಯ ಶಿವಕುಮಾರ್ ಎಂಬುವನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿಯಲ್ಲಿ ಸೈಬರ್, ಆರ್ಥಿಕ ಮತ್ತು ಮಾಧಕ ದ್ರವ್ಯ ಅಪರಾಧ ಠಾಣೆ ಮುನಿಸ್ವಾಮಿ, ಕೃಷ್ಣಮೂರ್ತಿ, ಪ್ರಕಾಶ್, ಚಾಲಕ ವೆಂಕಟರಾಮ್ ಪಾಲ್ಗೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss