ಹೊಸದಿಗಂತ ವರದಿ,ವಿಜಯಪುರ:
ಮೂರ್ಛೆ ರೋಗದಿಂದ ಸೈಕ್ಲಿಂಗ್ ಪಟುಯೊಬ್ಬ ಈಜುಗೊಳದಲ್ಲಿ ಬಿದ್ದು ಸಾವಿಗೀಡಾದ ಘಟನೆ ನಗರದ ಬಾಗಕೋಟ ರಸ್ತೆಯಲ್ಲಿರುವ ಸ್ವಿಮ್ಮಿಂಗ್ ಫುಲ್‌ನಲ್ಲಿ ನಡೆದಿದೆ.
ಜಮಖಂಡಿ ತಾಲೂಕಿನ ಹುನ್ನೂರು ಗ್ರಾಮದ ಸಂಭಾಜಿ ಮಲ್ಲಪ್ಪ ಜಾಧವ (18) ಮೃತಪಟ್ಟ ಬಾಲಕ.
ಸಂಭಾಜಿ ಈತ ಶಾಲೆ ಹಾಗೂ ಸೈಕ್ಲಿಂಗ್ ಕಲಿಯಲು ನಗರದ ಸೈಕ್ಲಿಂಗ್ ವಸತಿ ನಿಲಯದಲ್ಲಿ ವಾಸವಾಗಿದ್ದನು. ಈತ ಈಜಲು ಸ್ವಿಮ್ಮಿಂಗ್ ಫೂಲ್ ಬಳಿ ಹೋಗಿದ್ದಾನೆ. ಆ ವೇಳೆ ಫಿಟ್ಸ್ ಬಂದಿದ್ದರಿಂದ ಈಜುಗೊಳದಲ್ಲಿ ಬಿದ್ದು, ಮೃತಪಟ್ಟಿದ್ದಾನೆ.
ಜಲನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.