ಹೊಸದಿಗಂತ ಡಿಜಿಟಲ್ ಡೆಸ್ಕ್:
ನೆರೆಯ ರಾಜ್ಯಗಳಾದ ತಮಿಳುನಾಡು, ಆಂಧ್ರ ಪ್ರದೇಶದ ಕರಾವಳಿ ಭಾಗದಲ್ಲಿ ಫೆಂಗಲ್ ಅಬ್ಬರಿಸಿ ಹೈರಾಣಾಗಿಸಿದೆ. ಇದರ ಎಫೆಕ್ಟ್‌ಗೆ ಬೆಂಗಳೂರಿಗರು ನಡುಗಿದ್ದು, ಬೆಳಗ್ಗೆ ಯಾವುದು, ಮಧ್ಯಾಹ್ನ ಯಾವುದು ಎನ್ನುವುದು ಗೊತ್ತಾಗುತ್ತಿಲ್ಲ.
ಎರಡು ದಿನದಿಂದ ಬಿಸಿಲು ಕಾಣದ ಸಿಲಿಕಾನ್ ಸಿಟಿ ಜನರಿಗೆ ಮತ್ತಷ್ಟು ಮಳೆಯ ಕಾಟ ಎದುರಾಗಲಿದ್ದು, ಮುಂದಿನ ಎರಡ್ಮೂರು ದಿನ ಇದೇ ಪರಿಸ್ಥಿತಿ ಮುಂದುವರೆಯುವ ಸಾಧ್ಯತೆ.
ಫೆಂಗಲ್ ಚಂಡಮಾರುತ ಆಂಧ್ರ, ತಮಿಳುನಾಡು ಕರಾವಳಿ ಜಿಲ್ಲೆಗಳಲ್ಲಿ ಅಬ್ಬರಿಸಿ ಅವಾಂತರ ಸೃಷ್ಟಿಸಿದೆ. ಅತ್ತ ಜೋರು ಮಳೆಗಾಳಿಗೆ ಜನ ಕಂಗಾಲಾಗಿದ್ರೆ, ಇತ್ತ ರಾಜ್ಯದಲ್ಲಿ ಫೆಂಗಲ್ ಸೈಲೆಂಟ್ ಎಫೆಕ್ಟ್‌ಗೆ ಹೈರಾಣಾಗಿದ್ದಾರೆ. ಎರಡು ದಿನದಿಂದ ಜಿಟಿ ಜಿಟಿ ಮಳೆ, ಗಾಳಿ, ಚಳಿಗೆ ಬೇಸರಗೊಂಡಿರುವ ಬೆಂಗಳೂರಿಗರಿಗೆ ಮುಂದಿನ ಎರಡ್ಮೂರು ದಿನ ಇದೇ ವಾತವರಣ ಕಾಟ ಕೊಡುವ ಸಾಧ್ಯತೆ ಇದೆ.
ಚಂಡಮಾರುತದ ಎಫೆಕ್ಟ್ ಮುಂದಿನ ಮೂರ್ನಾಲ್ಕು ದಿನ ರಾಜ್ಯ ರಾಜಧಾನಿ ಸೇರಿದಂತೆ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ. ದಕ್ಷಿಣ ಒಳನಾಡಿನ ನಿನ್ನೆಯಿಂದಲೇ ಹಲವೆಡೆ ಮಳೆಯಾಗುತ್ತಿದೆ. ಮುಂದುವರಿದು ಬೆಂಗಳೂರಿನಲ್ಲಿ ನಿನ್ನೆಯಿಂದಲೇ ವರುಣ ಕಾಟ ಆರಂಭವಾಗಿದೆ. ಬೆಳಗ್ಗೆಯೇ ಮಳೆ ಸುರಿಯುತ್ತಿದ್ದು, ಜನ ಆಫೀಸ್‌ಗಳಿಗೆ ಹೋಗಲಾರದೆ ಹೈರಾಣಾಗಿದ್ದಾರೆ.