ಮೋಚಾ ಚಂಡಮಾರುತಕ್ಕೆ ನಲುಗಿದ ಮ್ಯಾನ್ಮಾರ್: ಸಾವಿನ ಸಂಖ್ಯೆ 6 ಕ್ಕೆ ಏರಿಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬಂಗಾಳಕೊಲ್ಲಿಯಲ್ಲಿ ಕಾಣಿಸಿಕೊಂಡ ಮೋಚಾ ಚಂಡಮಾರುತ (Cyclone Mocha) ಪರಿಣಾಮ ಬಾಂಗ್ಲಾ (Bangladesh) ಹಾಗೂ ಮ್ಯಾನ್ಮಾರ್ (Myanmar) ದೇಶಗಳಲ್ಲಿ ಆತಂಕ ಹೆಚ್ಚಾಗಿದ್ದು,ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್‌ನಲ್ಲಿ ಭಾರೀ ಅವಾಂತರಗಳು ಸೃಷ್ಟಿಯಾಗಿದೆ.

ಚಂಡಮಾರುತದ ಹೊಡೆತಕ್ಕೆ ಮ್ಯಾನ್ಮಾರ್‌ನ ರಖೈನ್ ರಾಜ್ಯದಲ್ಲಿ ಸಿಟ್ವೆ ಟೌನ್‌ಶಿಪ್ ಬಳಿ ಭೂಕುಸಿತವಾಗಿದೆ. ಕಟ್ಟಡವೊಂದರ ಛಾವಣಿ ಕುಸಿದು ಕನಿಷ್ಠ 6 ಜನರು ಸಾವನ್ನಪ್ಪಿದ್ದಾರೆ. ರಸ್ತೆಗಳು ನೀರಿನಿಂದ ತುಂಬಿ ಹರಿದು ನದಿಗಳಾಗಿ ಪರಿವರ್ತನೆಗೊಂಡಿವೆ. ಮರ, ಕಂಬಗಳು ಬಿದ್ದು, ಸಂಪರ್ಕವೂ ಕಡಿತಗೊಂಡಿದೆ ಎಂದು ವರದಿಯಾಗಿದೆ.

ಚಂಡಮಾರುತ ಗಂಟೆಗೆ ಸುಮಾರು 209 ಕಿ.ಮೀ ವೇಗದ ಪ್ರಬಲ ಗಾಳಿ ಹೊಂದಿದೆ ಎನ್ನಲಾಗಿದೆ. ಇದರಿಂದ ಹಲವು ನಗರಗಳ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು, ಮೊಬೈಲ್ ಫೋನ್ ಟವರ್‌ಗಳು, ದೋಣಿಗಳು ಮತ್ತು ದೀಪದ ಕಂಬಗಳಿಗೆ ಹಾನಿಯಾಗಿದೆ. ಬಲವಾದ ಗಾಳಿಯಿಂದಾಗಿ ಸಿಟ್ವೆ ಟೌನ್‌ಶಿಪ್‌ನ ಎತ್ತರದ ಪ್ರದೇಶಗಳಲ್ಲಿ ಕಟ್ಟಡಗಳಲ್ಲಿ ಆಶ್ರಯ ಪಡೆದಿದ್ದ ಸುಮಾರು 20,000 ಜನರಲ್ಲಿ 700ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಮೋಚಾದಿಂದ ಪಾರಾಗಲು ಸಾವಿರಾರು ಜನರನ್ನು ಮಠ, ಶಾಲೆಗಳಿಗೆ ಸ್ಥಳಾಂತರಿಸಲಾಗಿದೆ. ಮೋಚಾ ಸುಮಾರು 2 ದಶಕಗಳಲ್ಲಿಯೇ ಬಾಂಗ್ಲಾದೇಶದಲ್ಲಿ ಕಂಡುಬಂದ ಅತ್ಯಂತ ಭಯಾನಕ ಚಂಡಮಾರುತವಾಗಿದೆ ಎಂದು ಮುನ್ಸೂಚಕರು ಎಚ್ಚರಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!