ಅಂಕೋಲಾದಲ್ಲಿ ಸಿಲೆಂಡರ್ ಸ್ಪೋಟ: ಕಾರ್ಮಿಕರ ಶೆಡ್ಡುಗಳಿಗೆ ಬೆಂಕಿ

ಹೊಸದಿಗಂತ ವರದಿ,ಅಂಕೋಲಾ:

ನೌಕಾನೆಲೆ ಕಟ್ಟಡ ಕಾಮಗಾರಿ ನಡೆಯುತ್ತಿರುವ ಕಾರವಾರ ಅಂಕೋಲಾ ತಾಲೂಕಿನ ಗಡಿಯಲ್ಲಿರುವ ಮುದಗಾ ಸೀ ಬರ್ಡ್ ಕಾಲನಿಯ ಕಾರ್ಮಿಕರ ವಸತಿ ಪ್ರದೇಶದಲ್ಲಿ ಸಿಲೆಂಡರ್ ಸ್ಪೋಟ ಸಂಭವಿಸಿದ್ದು ಸ್ಪೋಟದ ತೀವ್ರತೆಗೆ ಕಾರ್ಮಿಕರು ವಾಸವಾಗಿದ್ದ ಸುಮಾರು 5 ಶೆಡ್ಡುಗಳು ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಇನ್ನು ಕೆಲವು ಶೆಡ್ಡುಗಳಿಗೆ ಹಾನಿ ಸಂಭವಿಸಿದೆ.
ಅದೃಷ್ಟವಶಾತ್ ಯಾವುದೇ ಸಾವು ನೋವುಗಳು ಸಂಭವಿಸಿಲ್ಲ.
ಮುದಗಾ ಸಮೀಪ ನೌಕಾನೆಲೆ ವಸತಿ ಸಮುಚ್ಚಯಗಳ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು ಹೊರ ರಾಜ್ಯಗಳ ನೂರಾರು ಕಾರ್ಮಿಕರು ಶೆಡ್ಡುಗಳಲ್ಲಿ ವಾಸವಾಗಿದ್ದಾರೆ.
ಬುಧವಾರ ಬೆಳಗ್ಗಿನ ಜಾವ ಶೆಡ್ಡ್ ಒಂದರಲ್ಲಿ ಸಿಲೆಂಡರ್ ಗೆ ಬೆಂಕಿ ತಗುಲಿ ಕಾರ್ಮಿಕರು ಹೊರಗೆ ಓಡಿ ಬಂದಿದ್ದು ಕೆಲವು ಸಮಯದಲ್ಲಿ ಸಿಲೆಂಡರ್ ಸ್ಪೋಟಗೊಂಡು ಅಕ್ಕ ಪಕ್ಕಗಳ ಶೆಡ್ಡುಗಳಿಗೆ ಬೆಂಕಿ ಆವರಿಸಿಕೊಂಡಿದೆ.
ಮುದಗಾ ಕಾಲನಿಯಲ್ಲಿ ದಟ್ಟ ಪ್ರಮಾಣದ ಹೊಗೆ ಆಗಸದತ್ತ ಆವರಿಸಿದ್ದು ಅಂಕೋಲಾ ಹಾರವಾಡ ಘಟ್ಟದಿಂದಲೇ ಕಂಡು ಬರುವಂತಾಗಿದ್ದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶೆಡ್ಡುಗಳಲ್ಲಿ ಹಲವಾರು ಸಿಲೆಂಡರ್ ಗಳಿದ್ದು ಎಷ್ಟು ಸಿಲೆಂಡರ್ ಗಳು ಸ್ಪೋಟಗೊಂಡಿವೆ ಎನ್ನುವ ಕುರಿತು ನಿಕರ ಮಾಹಿತಿ ಲಭ್ಯವಾಗಬೇಕಿದೆ.
ಶೆಡ್ಡುಗಳು ಬೆಂಕಿಗಾಹುತಿಯಾಗಿ ಸುಮಾರು 25 ಕ್ಕೂ ಹೆಚ್ಚು ಮೊಬೈಲ್ ಪೋನುಗಳು, ಪಾತ್ರೆ ಪಗಡೆಗಳು ಸುಟ್ಟು ಹೋಗಿದ್ದು ಕಾರವಾರ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!