Wednesday, July 6, 2022

Latest Posts

ಮನೆಯಲ್ಲಿ ಸಿಲಿಂಡರ್‌ ಸ್ಫೋಟ: ವೃದ್ಧೆ ಸಾವು, ಹತ್ತು ಮಂದಿಗೆ ಗಾಯ

ಹೊಸ ದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳುನಾಡಿನ ಸೇಲಂನನಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಫೋಟವಾಗಿದೆ. ಇದರ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ.

ಕಳಿಂಗಪಟ್ಟಿ ಎಂಬಲ್ಲಿನ ಪಾಂಡುರಂಗನ್​ ರಸ್ತೆಯಲ್ಲಿರುವ ಮನೆಯೊಂದರಲ್ಲಿ ಈ ಘಟನೆ ನಡೆದಿದ್ದು, 80 ವರ್ಷದ ರಾಜಲಕ್ಷ್ಮೀ ಎಂಬುವರು ಮೃತಪಟ್ಟಿದ್ದಾರೆ. ಚಹಾ ಮಾಡಲೆಂದು ಗ್ಯಾಸ್‌ ಆನ್‌ ಮಾಡಿದಾಗ ಭಾರೀ ಪ್ರಮಾಣದಲ್ಲಿ ಸ್ಫೋಟವಾಗಿದೆ.

ಗೋಪಿ (52) ಎಂಬುವರು ಸ್ಫೋಟದಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಇನ್ನು ವೆಂಕಟರಾಜನ್​, ಇಂದಿರಾಣಿ, ಮೋಹನ್​ ರಾಜ್​, ಧನಲಕ್ಷ್ಮೀ, ಸುದರ್ಶನ್​, ಗಣೇಶನ್​, ನಾಗಸುತ, ಗೋಪಾಲ್​, ಉಷಾರಾಣಿ, ಲೋಕೇಶ್​ ಕೂಡ ಗಾಯಗೊಂಡಿದ್ದು, ಎಲ್ಲರೂ ಸೇಲಂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

10ವರ್ಷದ ಬಾಲಕಿಯೊಬ್ಬಳು ಸ್ಫೋಟದಿಂದ ಕುಸಿದ ಮನೆಯ ಅವಶೇಷಗಳಡಿ ಸಿಲುಕಿದ್ದಳು. ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss