ಸೈರಸ್ ಮಿಸ್ತ್ರಿ ಸಾವಿನ ಪ್ರಕರಣ: ಅಪಘಾತಕ್ಕೆ ಸ್ತ್ರೀ ರೋಗತಜ್ಞೆಯ ನಿರ್ಲಕ್ಷ್ಯವೇ ಕಾರಣ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೈಗಾರಿಕೋದ್ಯಮಿ ಸೈರಸ್ ಮಿಸ್ತ್ರಿ ಅವರ ಸಾವಿನ ಪ್ರಕರಣದ ತನಿಖೆಯಲ್ಲಿ ಹಲವು ಮಾಹಿತಿ ಹೊರಬಂದಿದ್ದು,ಘಟನೆ ಸಂದರ್ಭದಲ್ಲಿ ಕಾರು ಚಾಲನೆ ಮಾಡುತ್ತಿದ್ದ ಸ್ತ್ರೀರೋಗ ತಜ್ಞರಾದ ಡಾ. ಅನಾಹಿತಾ ಪಾಂಡೋಲೆ ಕಾರಿನ ಸೀಟ್ ಬೆಲ್ಟ್ ಅನ್ನು ಸರಿಯಾಗಿ ಧರಿಸಿರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಮರ್ಸಿಡಿಸ್ ಬೆಂಜ್ ಕಾರನ್ನು ಓಡಿಸುತ್ತಿದ್ದ ಡಾ.ಅನಾಹಿತಾ, ಪೆಲ್ವಿಕ್ ಬೆಲ್ಟ್ ಅನ್ನು ಜೋಡಿಸದ ಕಾರಣ ಸೀಟ್ ಬೆಲ್ಟ್ ಅನ್ನು ಸರಿಯಾಗಿ ಧರಿಸಿರಲಿಲ್ಲ ಎಂದು ಪಾಲ್ಘರ್ ಪೊಲೀಸ್ ಅಧೀಕ್ಷಕ ಬಾಳಾಸಾಹೇಬ್ ಪಾಟೀಲ್ ಹೇಳಿದ್ದಾರೆ. ಈ ತನಿಖೆಗಳು ಚಾರ್ಜ್ ಶೀಟ್​ನ ಭಾಗವಾಗಿದ್ದು, ಪೊಲೀಸರು ನ್ಯಾಯಾಲಯದ ಮುಂದೆ ಸಲ್ಲಿಸಲಿದ್ದಾರೆ. ಅನಾಹಿತಾ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಪೊಲೀಸರು ಕಾಯುತ್ತಿದ್ದಾರೆ ಎಂದು ತಿಳಿಸಲಾಗಿದೆ.

ಇದಕ್ಕೂ ಮೊದಲು, ಮಿಸ್ತ್ರಿ ಪ್ರಯಾಣಿಸುತ್ತಿದ್ದ ಕಾರು ಈ ಹಿಂದೆ ವಿವಿಧ ಟ್ರಾಫಿಕ್ ಸಂಬಂಧಿತ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಪಟೋಲೆ ಅವರು ಸಂಚಾರ ನಿಯಮಗಳ ಉಲ್ಲಂಘನೆಯ ಇತಿಹಾಸವನ್ನು ಹೊಂದಿದ್ದಾರೆ ಮತ್ತು 2020ರಿಂದ ಹಲವಾರು ಸಂದರ್ಭಗಳಲ್ಲಿ ಅತಿ ವೇಗದ ಚಾಲನೆಗಾಗಿ ಚಲನ್‌ಗಳನ್ನು ನೀಡಲಾಗಿದೆ ಎಂದು ವರದಿಯಾಗಿದೆ.

ಡಾ. ಅನಾಹಿತಾ ಪತಿ ಡೇರಿಯಸ್ ಈ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಾರೆ. ಕಳೆದ ಅಕ್ಟೋಬರ್​ನಲ್ಲಿ ಕಾರು ಅಪಘಾತ ನಡೆದಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!