ಹೊಸದಿಗಂತ ಆನ್ ಲೈನ್ ಡೆಸ್ಕ್:
ಪ್ರಸಕ್ತ ವರ್ಷದ ‘ದಾದಾಸಾಹೇಬ್ ಫಾಲ್ಕೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಪ್ರಶಸ್ತಿ’ ಬಾಲಿವುಡ್ನ ದೀಪಿಕಾ ಪಡುಕೋಣೆ, ಅಕ್ಷಯ್ ಕುಮಾರ್, ಸುಶ್ಮಿತಾ ಸೇನ್, ಸುಶಾಂತ್ ಸಿಂಗ್ ರಜಪೂತ್ ಅವರಿಗೆ ಒಲಿದು ಬಂದಿದೆ.
ಹಾರರ್- ಕಾಮಿಡಿ “ಲಕ್ಷ್ಮಿ’ ಚಿತ್ರದ ನಟನೆಗಾಗಿ ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ಗೆ’ಉತ್ತಮ ನಟ’ ಪ್ರಶಸ್ತಿ ಲಭಿಸಿದ್ದು, ಆಯಸಿಡ್ ದಾಳಿಗೆ ತುತ್ತಾಗಿ ಬದುಕುಳಿದ ಲಕ್ಷ್ಮಿ ಅಗರ್ವಾಲ್ ಜೀವನಗಾಥೆಯ “ಚಪಾಕ್’ ಚಿತ್ರದ ನಟನೆಗಾಗಿ ದೀಪಿಕಾ ಪಡುಕೋಣೆಗೆ ‘ಉತ್ತಮ ನಟಿ’ ಪ್ರಶಸ್ತಿ ನೀಡಲಾಗಿದೆ.
ಸುಶಾಂತ್ ಸಿಂಗ್ ರಜಪೂತ್ ಅವರಿಗೆ ‘ಚಿಚೋರೆ’ ಯಲ್ಲಿನ ಅಭಿನಯಕ್ಕಾಗಿ ಮರಣೋತ್ತರವಾಗಿ ‘ವಿಮರ್ಶಕರ ಉತ್ತಮ ನಟ’ಗೌರವ ಸಿಕ್ಕರೆ, ವೆಬ್ ಸೀರಿಸ್ ವಿಭಾಗದಲ್ಲಿನ ‘ಉತ್ತಮ ನಟಿ’ ಪ್ರಶಸ್ತಿ ‘ಆರ್ಯ’ ಚಿತ್ರಕ್ಕಾಗಿ ಸುಶ್ಮಿತಾ ಸೇನ್ ಪಾಲಾಗಿದೆ.
ನೆಟ್ ಫ್ಲಿಕ್ಸ್ನ ‘ಗಿಲ್ಟಿ’ ಸಿನಿಮಾದಲ್ಲಿನ ಅತ್ಯುತ್ತಮ ನಟನೆಗಾಗಿ ಕಿಯಾರಾ ಅಡ್ವಾಣಿಗೆ ‘ವಿಮರ್ಶಕರ ಉತ್ತಮ ನಟಿ’ ಗರಿ ಒಲಿದಿದೆ.
ಪ್ರಶಸ್ತಿ ಪಟ್ಟಿ
ಉತ್ತಮ ನಟಿ: ದೀಪಿಕಾ ಪಡುಕೋಣೆ (ಚಪಾಕ್)
ಉತ್ತಮ ನಟ: ಅಕ್ಷಯ್ ಕುಮಾರ್ (ಲಕ್ಷ್ಮಿ)
ವಿಮರ್ಶಕರ ಉತ್ತಮ ನಟಿ: ಕಿಯಾರಾ ಅಡ್ವಾಣಿ (ಗಿಲ್ಟಿ)
ವಿಮರ್ಶಕರ ಉತ್ತಮ ನಟ: ಸುಶಾಂತ್ ಸಿಂಗ್ ರಜಪೂತ್ (ಚಿಚೋರೆ)
ಉತ್ತಮ ಚಿತ್ರ: ತಾನಾಜಿ
ಉತ್ತಮ ವಿದೇಶಿ ಫೀಚರ್ ಚಿತ್ರ: ಪ್ಯಾರಾಸೈಟ್
ಉತ್ತಮ ನಿರ್ದೇಶಕ: ಅನುರಾಗ್ ಬಸು (ಲುಡೋ)