ಮೇಷ
ಯಾವ ಗುರಿ ಇರಿಸಿಕೊಂಡಿದ್ದೀರೋ ಅದು ಸಾಧಿತವಾಗುವ ಲಕ್ಷಣ ತೋರುವುದು. ಇಂದಿನದು ನಿಮ್ಮ ಪಾಲಿಗೆ ಫಲಪ್ರದ ಮತ್ತು ಆನಂದದ ದಿವಸ.
ವೃಷಭ
ನಿಮಗೆ ಅಚ್ಚರಿ ಯೆನಿಸುವ ಬೆಳವಣಿಗೆ ಸಂಭವಿಸುವುದು. ಕೆಲವರ ವರ್ತನೆಯೂ ಅನಿರೀಕ್ಷಿತ ಎನಿಸುವುದು. ಶಾಪಿಂಗ್ ಖರ್ಚು ಹೆಚ್ಚು.
ಮಿಥುನ
ವೃತ್ತಿಯಲ್ಲಿ ತೃಪ್ತಿಕರ ದಿನ. ಮಾಡಿದ ಕಾರ್ಯದಲ್ಲಿ ಸಂತೋಷ. ಆರೋಗ್ಯ ವೃದ್ಧಿ. ಸಣ್ಣಪುಟ್ಟ ಸಮಸ್ಯೆಗಳು ಇಂದು ನಿಮ್ಮ ಮನಸ್ಸು ಕೆಡಿಸಲಾರವು.
ಕಟಕ
ಯಾವುದೇ ಕಾರ್ಯ ಇಂದು ಸಫಲತೆ ಕಾಣುವುದು. ಅದು ವೃತ್ತಿಗೆ ಸಂಬಂಧಿಸಿದ್ದು ಆಗಿರಬಹುದು ಅಥವಾ ಖಾಸಗಿಯೂ ಆಗಿರಬಹುದು.
ಸಿಂಹ
ಆಪ್ತೇಷ್ಟರ ಜತೆ ಹೆಚ್ಚು ಸಮಯ ಕಳೆಯುವ ಅವಕಾಶ. ಕೌಟುಂಬಿಕ ಬಿಕ್ಕಟ್ಟು ಶಮನ. ಹಣದ ವಿಷಯದಲ್ಲಿ ಮೂಡಿದ್ದ ಚಿಂತೆಯೂ ಪರಿಹಾರ ಕಾಣುವುದು.
ಕನ್ಯಾ
ಕೌಟುಂಬಿಕ ಉದ್ದೇಶವೊಂದು ಇಂದು ಈಡೇರುವುದು. ಇದರಿಂದ ಬಾಂಧವ್ಯ ವೃದ್ಧಿಯಾಗಲಿದೆ. ವಸ್ತು ಖರೀದಿಯ ಉತ್ಸಾಹ, ಹೆಚ್ಚು ಖರ್ಚು.
ತುಲಾ
ಕೆಲವರ ಸಂಗ ನಿಮಗಿಂದು ಹೆಚ್ಚು ಸಂತೋಷ ತರುತ್ತದೆ. ಚಿಂತೆಗಳನ್ನು ಮರೆಯುವಿರಿ. ಅನಿರೀಕ್ಷಿತ ಧನಲಾಭದ ಸಂಕೇತವಿದೆ.
ವೃಶ್ಚಿಕ
ಕೆಲಸ ಆರಂಭಿಸುವ ಮೊದಲೇ ‘ಇದು ಸಫಲ ವಾಗದು’ ಎಂಬ ಮಾನಸಿಕತೆ ಬೇಡ. ಕಠಿಣ ಕೆಲಸವೂ ಸಫಲ ವಾಗುವ ಅದೃಷ್ಟ ಇಂದು ನಿಮಗಿದೆ.
ಧನು
ಪ್ರತಿದಿನ ಹೊಸ ಆಯ್ಕೆಯನ್ನು ಹೊತ್ತು ತರುವುದು. ಇತರರ ಭಾವನೆಗಳನ್ನು ಅರ್ಥ ಮಾಡಿಕೊಂಡರೆ ನಿಮ್ಮ ಕೆಲವು ಸಮಸ್ಯೆ ಪರಿಹಾರ ಕಾಣುವುದು.
ಮಕರ
ಸಂಬಂಧದಲ್ಲಿ ಸಣ್ಣಪುಟ್ಟ ಕಿರಿಕಿರಿ ಕಾಣಿಸಿಕೊಂಡೀತು. ಅತಿರೇಕದ ಪ್ರತಿಕ್ರಿಯೆ ತೋರದಿರಿ. ಯೋಚಿಸಿ ಕಾರ್ಯವೆಸಗಿ. ಮಾತು ನಿಯಂತ್ರಣದಲ್ಲಿರಲಿ.
ಕುಂಭ
ಆತ್ಮವಿಶ್ವಾಸ ಹೆಚ್ಚಿ ಸುವ ಪ್ರಸಂಗ ಸಂಭವಿಸುವುದು. ಆರಂಭಿಕ ಕಷ್ಟಗಳಿಗೆ ಹಿಂಜರಿಯಬೇಡಿ. ಮುಂದೆ ನಿಮಗೆ ಉತ್ತಮ ಫಲ ಕಾದಿದೆ.
ಮೀನ
ಕುಟುಂಬ ಸದಸ್ಯರ ಜತೆಗಿನ ಮುಕ್ತ ಮಾತುಕತೆಯು ಭಿನ್ನಾಭಿಪ್ರಾಯ ನಿವಾರಿಸುವುದು. ಸೌಹಾರ್ದತೆ ವೃದ್ಧಿ. ಆರೋಗ್ಯ ಸ್ಥಿರ.