ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ನೋಡಿ

ಮೇಷ
ಸಹೋದ್ಯೋಗಿಗಳ ಜತೆ ಅನವಶ್ಯ ವಾಗ್ವಾದಕ್ಕೆ ಇಳಿಯದಿರಿ. ವಿಕೋಪಕ್ಕೆ ಹೋದೀತು. ಆರ್ಥಿಕ ಪರಿಸ್ಥಿತಿ ಸಮಾಧಾನಕರ. ಉಳಿತಾಯಕ್ಕೆ ಹೆಚ್ಚು ಆದ್ಯತೆ ಕೊಡಿ.

ವೃಷಭ
ಕಾಡುತ್ತಿರುವ ದೈಹಿಕ ನೋವಿನಿಂದ ಶಮನ ಪಡೆಯುವಿರಿ. ಮನೆಯಲ್ಲಿ ಹೆಚ್ಚಿನ ಹೊಣೆಗಾರಿಕೆಯಿಂದ ಮುಕ್ತಿ. ಕೌಟುಂಬಿಕ ಸಹಕಾರ.

ಮಿಥುನ
ಕೌಟುಂಬಿಕ ಬಿಕ್ಕಟ್ಟು ಪರಿಹರಿಸಲು ಗಮನ ಕೊಡಿ. ಅದನ್ನು ದೀರ್ಘ ಎಳೆಯಲು ಬಿಡಬೇಡಿ. ಬಂಧುಗಳು ಹಸ್ತಕ್ಷೇಪ ನಡೆಸಲು ಅವಕಾಶ ಕೊಡದಿರಿ.

ಕಟಕ
ಬಿಕ್ಕಟ್ಟಿನ ವಿಚಾರದಲ್ಲಿ ನಿಮ್ಮ ಕ್ಷಿಪ್ರ ಪ್ರತಿಕ್ರಿಯೆ ಉತ್ತಮ ಫಲ ನೀಡಲಿದೆ. ಅದನ್ನು ಹಾಗೇ ಮುಂದುವರಿಸದಿರಿ. ಶೀಘ್ರ ಇತ್ಯರ್ಥಪಡಿಸಿ.ಆರ್ಥಿಕ ಉನ್ನತಿ.

ಸಿಂಹ
ಖಾಸಗಿ ಬದುಕಿನಲ್ಲಿ ಕೆಲವು ಸಂಕಷ್ಟ ಬರಬಹುದು. ನೆಮ್ಮದಿ ದೂರ.ಇದರಿಂದ ದೇವರು, ಅಧ್ಯಾತ್ಮದತ್ತ ಮನಸ್ಸು  ವಾಲಬಹುದು.

ಕನ್ಯಾ
ವಿಶೇಷಗಳಿಲ್ಲದ ಸಾಮಾನ್ಯ ದಿನ. ವೃತ್ತಿಯಲ್ಲಿ  ಕೆಲಸ ಕಡಿಮೆ. ಕೌಟುಂಬಿಕ ಕಾರ್ಯಗಳೂ ಹೆಚ್ಚು ಬಾಧಿಸಲಾರವು. ಬಂಧುಗಳ ಭೇಟಿ.

ತುಲಾ
ಆರ್ಥಿಕ ಒತ್ತಡ. ಮಾನಸಿಕ ಕಿರಿಕಿರಿ. ಇದು ನಿಮ್ಮ ನಡೆನುಡಿಯಲ್ಲಿ ಪ್ರತಿಫಲಿಸುವುದು. ಆಪ್ತರೊಂದಿಗೆ ಸಹನೆಯಿಂದ ವರ್ತಿಸಿ. ಬಂಧುತ್ವ ಕೆಡದಿರಲಿ.

ವೃಶ್ಚಿಕ
ಯೋಜಿಸಿ ಕಾರ್ಯ ಎಸಗಿ. ಇಲ್ಲವಾದರೆ ನಿಮ್ಮ  ಕಾರ್ಯವು ಅರ್ಧದಲ್ಲೆ ನಿಂತೀತು. ಆಹಾರ ಸೇವನೆಯಲ್ಲಿ ಎಚ್ಚರ ವಹಿಸಿ. ಅಜೀರ್ಣದಂತ ಸಮಸ್ಯೆ ಕಾಡೀತು.

ಧನು
ಮನಸ್ಸಿನ ಒತ್ತಡವು ದೈನಂದಿನ ಕರ್ತವ್ಯ ನೆರವೇರಿಸಲು ಅಡ್ಡಿ ತರುವುದು. ಏಕಾಗ್ರತೆ ಕಷ್ಟವಾಗುವುದು. ಸಂಬಂಧದಲ್ಲಿಯೂ ಬಿರುಕು ಉಂಟಾದೀತು.

ಮಕರ
ಮನಶ್ಯಾಂತಿ ಕದಡಿದ್ದ ಪ್ರಸಂಗವು ಸುಖಾಂತ್ಯ ಕಾಣಲಿದೆ. ನಿಮ್ಮ ಉದ್ದೇಶದಂತೆ ಎಲ್ಲವೂ ನೆರವೇರುವುದು.  ತುಸು ಆರ್ಥಿಕ ಬಿಕ್ಕಟ್ಟು ಕಾಡಬಹುದು.

ಕುಂಭ
ನಿಮ್ಮ ದಿನವಹಿ ಕರ್ತವ್ಯ ನೆರವೇರಿಸಲು ಇದ್ದ  ಅಡ್ಡಿ ತೊಲಗುವುದು. ವಿರೋಧಗಳು ಕೊನೆಗೊಳ್ಳುತ್ತವೆ. ಹಣ ಗಳಿಕೆಯ ಹಾದಿ ಸುಗಮವಾಗಲಿದೆ.

ಮೀನ
ವೃತ್ತಿಯಲ್ಲಿ  ಪ್ರಗತಿ. ಇಚ್ಛಿಸಿದ ಕಾರ್ಯಸಿದ್ಧಿ. ಪ್ರೀತಿಪಾತ್ರರ ಭೇಟಿ ಯಿಂದ ಸಂತೋಷ. ಕುಟುಂಬಸ್ಥರ ಸಹಕಾರದಿಂದ  ಕಾರ್ಯ ಸಫಲತೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!