ಮೇಷ
ಇಂದು ಕೆಲವು ಸವಾಲು ಎದುರಿಸುವಿರಿ.ನಿಮ್ಮ ಸ್ಥೈರ್ಯ ಕುಂದಿಸಲು ಯತ್ನಿಸುವವರಿಂದ ದೂರವಿರಿ. ಆರೋಗ್ಯ ಸಮಸ್ಯೆ ಉಂಟಾದೀತು. ಆರ್ಥಿಕ ಒತ್ತಡ.
ವೃಷಭ
ಸಮಸ್ಯೆ ಉಂಟಾದರೆ ನೆರವಿಗೆ ಜನರು ಇಂದು ಸಿದ್ಧರಿರುವರು. ವೃತ್ತಿಯಲ್ಲಿ ಭಾವುಕತೆ ನಿಮ್ಮ ಕರ್ತವ್ಯಕ್ಕೆ ಅಡ್ಡಿ ಬರದಂತೆ ನೋಡಿಕೊಳ್ಳಿ. ಆರೋಗ್ಯ ಸ್ಥಿರ.
ಮಿಥುನ
ಕುಂದಿದ ಮನಸ್ಥಿತಿ. ಕಿರಿಕಿರಿ. ಅನವಶ್ಯ ವಿಷಯಗಳಿಗೂ ನಿಮ್ಮ ಸಹನೆ ಕಳಕೊಳ್ಳುವಿರಿ. ಕೆಲಸದ ಮೇಲೆ ಗಮನ ಕೇಂದ್ರೀಕರಿಸಲು ಸಾಧ್ಯವಾಗದು.
ಕಟಕ
ಅಡೆತಡೆ ನಿವಾರಿಸಲು ಸಫಲರಾಗುವಿರಿ. ಹಾಗಾಗಿ ಉಲ್ಲಸಿತ ಮನಸ್ಥಿತಿ. ಪಾಸಿಟಿವ್ ಯೋಚನೆಗಳು ನಿಮ್ಮ ಬದುಕಿನಲ್ಲಿ ಬದಲಾವಣೆ ತರಬಹುದು.
ಸಿಂಹ
ಇಂದು ದುಡುಕಿನ ನಿರ್ಧಾರ ತಾಳದಿರಿ. ಅದು ನಿಮಗೆ ಪ್ರತಿಕೂಲ ಪರಿಣಾಮ ಬೀರೀತು.ಸಣ್ಣ ವಿಷಯಕ್ಕೂ ತಾಳ್ಮೆ ಕಳಕೊಳ್ಳುವಿರಿ. ಆಪ್ತರ ಮೇಲೆ ರೇಗದಿರಿ.
ಕನ್ಯಾ
ನಿಮಗೆ ಪೂರಕವಾದ ದಿನ.ಉದ್ಯಮದಲ್ಲಿ ಯಶಸ್ಸು. ವೃತ್ತಿಯಲ್ಲಿ ಉನ್ನತಿ.ಆತ್ಮೀಯರ ಸಂಗದಲ್ಲಿ ಕಾಲ ಕಳೆಯುವ ಅವಕಾಶ. ಕೌಟುಂಬಿಕ ಶಾಂತಿ.
ತುಲಾ
ಪ್ರಗತಿ, ಧನಾಗಮ, ಕೌಟುಂಬಿಕ ನೆಮ್ಮದಿ ಇಂದು ನಿಮ್ಮದಾಗಲಿದೆ. ಯೋಜಿಸಿ ಕಾರ್ಯ ಎಸಗಿ. ಆ ಮೂಲಕ ಗೊಂದಲ, ಅವ್ಯವಸ್ಥೆ ತಪ್ಪಿಸಿಕೊಳ್ಳಿ.
ವೃಶ್ಚಿಕ
ಸಹೋದ್ಯೋಗಿಗಳ ಅಸಹಕಾರ ಎದುರಿಸುವಿರಿ. ಇದರಿಂದ ಉದ್ದೇಶಿತ ಕಾರ್ಯ ಸಫಲವಾಗದು. ಹೊಂದಾಣಿಕೆಯ ಮನಸ್ಥಿತಿ ಒಳ್ಳೆಯದು.
ಧನು
ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಿರಿ.ಅದಕ್ಕಾಗಿ ಹೊಸ ಹಾದಿ ತುಳಿಯುವಿರಿ.ರಿಸ್ಕ್ ತೆಗೆದುಕೊಳ್ಳಲು ಹಿಂಜರಿಕೆ ಬೇಕಿಲ್ಲ.
ಮಕರ
ನಿರುತ್ಸಾಹ, ಜಡತ್ವ ಇಂದು ಕಾಡಬಹುದು. ಕೆಲದಿನಗಳ ಅತಿ ಕೆಲಸ ಇದಕ್ಕೆ ಕಾರಣ. ವಿರಾಮ ಪಡೆಯುವುದು ಆರೋಗದ ದೃಷ್ಟಿಯಿಂದ ನಿಮಗೆ ಒಳಿತು.
ಕುಂಭ
ಖಾಸಗಿ ಸಂಬಂಧಕ್ಕೆ ಇಂದು ಆದ್ಯತೆ ಕೊಡಿ. ಪ್ರೀತಿಪಾತ್ರರ ಅಸಮಾಧಾನ ನೀಗಿಸಿ. ಹಣದ ಕೊರತೆಯಿಂದ ಖರೀದಿಯ ಯೋಜನೆ ವಿಫಲವಾದೀತು.
ಮೀನ
ಖಾಸಗಿ ಬದುಕಲ್ಲಿ ಸಮಸ್ಯೆ. ಸಂಬಂಧದಲ್ಲಿ ಅಸಹಕಾರ. ನಿಮ್ಮ ಸುತ್ತಲಿನ ನೆಗೆಟಿವ್ ವಿಷಯಗಳನ್ನು ಮನಸ್ಸಿಗೆ ಹಚ್ಚಿಕೊಳ್ಳದಿರಿ.