ಉಫ್…ಅಕ್ಕಿ, ಸಕ್ಕರೆ 300, ಕೋಳಿ ಮೊಟ್ಟೆಗೆ 40, ಕಪ್ ಚಹಾಗೆ ಬರೋಬ್ಬರಿ 100 ರೂ.!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಆರ್ಥಿಕ ಹಾಗೂ ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದ್ದು, ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ.
ಕೊಲೊಂಬೊದಲ್ಲಿ ಮೊಟ್ಟೆ 35-40 ರೂಪಾಯಿ, ಅಕ್ಕಿ, ಸಕ್ಕರೆ ಕೆಜಿಗೆ 300 ರೂಪಾಯಿ, ಕೋಳಿ 1,000, ಪೆಟ್ರೋಲ್ ಲೀಟರ್‌ಗೆ 330, ಹಾಲಿನ ಪುಡಿ ಕೆಜಿಗೆ 4,000 ರೂಪಾಯಿಗಳಾಗಿದ್ದರೆ, ಒಂದು ಕಪ್ ಚಹಾ ದರ ಬರೋಬ್ಬರಿ 100 ರೂಪಾಯಿಗಳಾಗಿವೆ.
ಈ ನಡುವೆ ವಿದ್ಯುತ್ ಕಡಿತ, ಆರ್ಥಿಕ, ರಾಜಕೀಯ ಬಿಕ್ಕಟ್ಟು ವಿರೋಧಿಸಿ ಕಳೆದ ಹಲವು ತಿಂಗಳಿಂದ ನಿರಂತರ ಪ್ರತಿಭಟನೆ, ಹಿಂಸಾಚಾರದಲ್ಲಿ 9 ಜನರು ಪ್ರಾಣ ಕಳೆದುಕೊಂಡಿದ್ದು, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಕೆಲವೇ ವಾರದಲ್ಲಿ ದ್ವೀಪ ರಾಷ್ಟ್ರದಲ್ಲಿ ಕೇವಲ ಒಂದು ವಾರಕ್ಕೆ ಸಾಕಾಗುವಷ್ಟು ತೈಲ ಉಳಿದಿದೆ. ಈ ಕುರಿತು ವೈದ್ಯರು, ಶುಶ್ರೂಕಿಯರು ಹಾಗೂ ವೈದ್ಯಕೀಯ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದು, ವೈದ್ಯಕೀಯ ಸಿಬ್ಬಂದಿಯನ್ನು ತುರ್ತು ಕೆಲಸಗಾರರೆಂದು ಪರಿಗಣಿಸಲಾಗಿದ್ದರೂ, ನಮಗೆ ಇಂಧನ ದೊರೆಯುತ್ತಿಲ್ಲ. ಇದು ಸಹಿಸಲಾಗದ ಪರಿಸ್ಥಿತಿ ಉದ್ಭವಿಸಿದ್ದು, ಸರ್ಕಾರ ಈ ನಮ್ಮ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!