Friday, July 1, 2022

Latest Posts

ದಿನಭವಿಷ್ಯ| ಈ ರಾಶಿಯವರಿಗಿಂದು ಮನೆ, ಕಚೇರಿಯಲ್ಲಿ ಹೊಣೆಗಾರಿಕೆ ಹೆಚ್ಚಳ..

ದಿನಭವಿಷ್ಯ

ಮೇಷ
ನಿಮ್ಮ ಕ್ರಿಯಾಶೀಲತೆಯನ್ನು ವ್ಯರ್ಥ ಮಾಡುತ್ತಿದ್ದೀರಿ. ಉದಾಸೀನತೆ ಬಿಟ್ಟು ಕಾರ್ಯವೆಸಗಿ. ಇತರರ ಮೆಚ್ಚುಗೆ, ಟೀಕೆಗೆ ಗಮನ ಕೊಡದಿರಿ.

ವೃಷಭ
ಪ್ರೀತಿಯ ಭಾವ ನಿಮ್ಮನ್ನು ಆವರಿಸಬಹುದು. ಪ್ರೀತಿಗಾಗಿ ಕೌಟುಂಬಿಕ  ಹಿತಾಸಕ್ತಿ ಕಡೆಗಣಿಸದಿರಿ. ಉದ್ಯೋಗಿಗಳಿಗೆ ಆರ್ಥಿಕ ಒತ್ತಡ.

ಮಿಥುನ
ಮಿತ್ರರೊಂದಿಗೆ ಜಗಳ ಸಂಭವ. ಸಣ್ಣ ಮಾತಿಗೂ ರೇಗದಿರಿ. ಹಣ ಹೂಡಿಕೆಗೆ ಇಂದು ಸಕಾಲ ಹಾಗೂ ಲಾಭದಾಯಕ. ಕೌಟುಂಬಿಕ ಶಾಂತಿ.

ಕಟಕ
ಮನೆ ಮತ್ತು ಕಚೇರಿಯಲ್ಲಿ ಹೊಣೆಗಾರಿಕೆ ಹೆಚ್ಚಳ. ಎಲ್ಲ ಕೆಲಸ ಮುಗಿಸಲು ಸಾಧ್ಯವಾಗದು. ಕೆಲವರ ಅಸಮಾಧಾನಕ್ಕೆ ತುತ್ತಾಗುವಿರಿ.

ಸಿಂಹ
ಖಾಸಗಿ ಬದುಕಿನಲ್ಲಿ ಸಮಸ್ಯೆ. ಮಾನಸಿಕ ಚಿಂತೆಯಿಂದ ದೈಹಿಕವಾಗಿಯೂ ದುಷ್ಪರಿಣಾಮ. ವಿಶ್ವಾಸಾರ್ಹರು ಕೈಕೊಡುತ್ತಾರೆ.

ಕನ್ಯಾ
ಉದ್ಯೋಗ ಕ್ಷೇತ್ರದಲ್ಲಿ ಕೆಲವರ ಅವಕೃಪೆಗೆ ತುತ್ತಾಗುವಿರಿ. ಇತರರ ಕರ್ತವ್ಯಚ್ಯುತಿಯ ಹೊಣೆ ನೀವೇ ಹೊರಬೇಕಾಗುವುದು. ಕೌಟುಂಬಿಕ ಕ್ಷೆಭೆ.

ತುಲಾ
ಖಾಸಗಿ ಬದುಕಿನಲ್ಲಿ ಏರುಪೇರು. ಪ್ರೀತಿಯ ಆಕರ್ಷಣೆಗೆ ತುತ್ತಾಗುವಿರಿ. ಆತ್ಮೀಯರೇ ಮುನಿಸಿಕೊಳ್ಳುವ ಸಾಧ್ಯತೆಯಿದೆ. ಮಾತಿನ ಮೇಲೆ ಎಚ್ಚರವಿರಲಿ.

ವೃಶ್ಚಿಕ
ಆತ್ಮೀಯ ಸಂಬಂಧ ವೊಂದನ್ನು ಇನ್ನಷ್ಟು ಗಟ್ಟಿಗೊಳಿಸಲು ಯೋಜಿಸುವಿರಿ. ವಿಘ್ನಸಂತೋಷಿಗಳು ಸೋಲು ಕಾಣುತ್ತಾರೆ. ಆಪ್ತರಿಂದ ಬೆಂಬಲ.

ಧನು
ನಿಮ್ಮ ಮೇಲೆ ಮೊದಲಾಗಿ ವಿಶ್ವಾಸ ಹೆಚ್ಚಿಸಿಕೊಳ್ಳಿ. ನಿಮ್ಮಿಂದ ಆಗದು ಎಂಬ ಅಪನಂಬಿಕೆ ಬಿಡಿ. ಆರೋಗ್ಯ ಸಮಸ್ಯೆ ಇಂದು ಕಾಡಬಹುದು.

ಮಕರ
ಉದ್ಯೋಗ ಬದಲಾವಣೆ ಬಯಸುವವರಿಗೆ ಶುಭ ಸುದ್ದಿ. ಹೊಸ ಅವಕಾಶ ಲಭ್ಯ. ಕೌಟುಂಬಿಕ ಒತ್ತಡಗಳ ನಿವಾರಣೆ. ಆರ್ಥಿಕ ಸ್ಥಿತಿ ಸುಧಾರಣೆ.

ಕುಂಭ
ಕೌಟುಂಬಿಕ ವಿಚಾರದಲ್ಲಿ ಹೊರಗಿನವರ ಸಲಹೆ ಕೇಳದಿರಿ. ಅದರಿಂದ ನಿಮಗೇ ತೊಂದರೆ. ಆಪ್ತರೊಂದಿಗಿನ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಿ.

ಮೀನ
ಭಾವನಾತ್ಮಕ ಶಿಸ್ತು ಕಲಿಯಬೇಕಾಗುತ್ತದೆ.  ನಿಮ್ಮ ಭಾವನೆಯನ್ನು ಸುಲಭದಲ್ಲಿ ಬಿಟ್ಟುಕೊಡಬೇಡಿ. ಆಪ್ತರೆನಿಸಿದವರು ದೂರವಾದಾರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss