spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, December 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಿನ ಭವಿಷ್ಯ| ಈ ರಾಶಿಯವರಿಗೆ ಇಂದು ಅನುಕೂಲಕರ ದಿನ

- Advertisement -Nitte

ದಿನ ಭವಿಷ್ಯ (15.10.2021)

ಮೇಷ
ಆಪ್ತರ ಸಂಗದಲ್ಲಿ ಸಂತೋಷ ಪಡೆಯಲು ಯತ್ನಿಸುವಿರಿ. ಆದರೆ ಅದು ಸಾಧ್ಯವಾಗದು. ವೃತ್ತಿಯಲ್ಲಿ ಮನಸ್ಸು ಕೆಡಿಸುವ ಬೆಳವಣಿಗೆ ಸಂಭವಿಸಬಹುದು.

ವೃಷಭ
ನಿಮಗೆ ಅನುಕೂಲಕರ ದಿನ. ಪ್ರಮುಖ ಕಾರ್ಯವೊಂದು ಈಡೇರುವುದು. ಕೌಟುಂಬಿಕ ಸಮಸ್ಯೆ ಪರಿಹಾರ. ಆರ್ಥಿಕ ಸ್ಥಿತಿ ಸುಧಾರಣೆ.

ಮಿಥುನ
ಕೌಟುಂಬಿಕ ಪರಿಸರದಲ್ಲಿ  ಶಾಂತಿ, ನೆಮ್ಮದಿ ಕಾಪಾಡಲು ಆದ್ಯತೆ ಕೊಡುವಿರಿ. ಭಿನ್ನಮತ ವನ್ನು ಶಾಂತಿಯಿಂದ ಪರಿಹರಿಸಿಕೊಳ್ಳಿ. ಸಂಘರ್ಷ ತಪ್ಪಿಸಿ.

ಕಟಕ
ಮಾನಸಿಕವಾಗಿ ವ್ಯಗ್ರರಾಗಿದ್ದರೂ ನೀವಿಂದು ಸಮಾಧಾನ ದಿಂದ ವರ್ತಿಸಬೇಕು. ಕೋಪತಾಪ ನಿಮಗೆ ಒಳಿತು ತರದು. ಮೌನ ಸಾಸಿ.

ಸಿಂಹ
ಮಾಡಬೇಕಾದ ಕೆಲಸ ಬಹಳವಿದೆ. ಸಮಯ ಸಾಲದು ಎಂಬ ಆತಂಕ. ಒಂದೊಂದಾಗಿ ಕೆಲಸ ಪೂರೈಸುತ್ತಾ ಬಂದರೆ ನಿಮ್ಮ ಆತಂಕ ಪರಿಹಾರ. ಸಹಕಾರ ಲಭ್ಯ.

ಕನ್ಯಾ
ಕೌಟುಂಬಿಕ ವ್ಯವಹಾರ ಇಂದು ಆದ್ಯತೆ ಪಡೆಯುವುದು. ಕೆಲವು ಬೇಡಿಕೆ ಈಡೇರಿಸಲು ಕಷ್ಟ ಪಡುವಿರಿ. ಆದರೂ ಇದ್ದುದರಲ್ಲಿ ಖುಷಿ ಕಾಣುವುದೊಳಿತು.

ತುಲಾ
ಆಪ್ತರೊಬ್ಬರ ಆರೋಗ್ಯದ ಬಗ್ಗೆ ಕಳವಳ ಮೂಡಬಹುದು. ಉದ್ಯೋಗದಲ್ಲಿ ಉದ್ವಿಗ್ನ ಸ್ಥಿತಿ ಎದುರಿಸುವಿರಿ. ಒಟ್ಟಿನಲ್ಲಿ ಮನಸ್ಸಿಗೆ ತಲ್ಲಣದ ದಿನ.

ವೃಶ್ಚಿಕ
ಇತರರ ಸಮಸ್ಯೆ ಪರಿಹರಿಸಲು ಮುತುವರ್ಜಿ ತೋರುವಿರಿ. ನಿಮ್ಮ ಕುಟುಂಬದ ಕಡೆಗೂ ಗಮನ ಕೊಡಿ. ಅವರ ಆಶಯ ಈಡೇರಿಸಿ.

ಧನು
ಕಷ್ಟದ ಸಮಯ ಶಾಶ್ವತವಲ್ಲ. ಇದನ್ನು ಅರಿಯಿರಿ. ನಿಮ್ಮ ಕಷ್ಟಗಳೂ ಪರಿಹಾರ ಕಾಣುವವು. ಆ ನಿಟ್ಟಿನಲ್ಲಿ ಪ್ರಯತ್ನವೂ ಅಗತ್ಯ. ಆರ್ಥಿಕ ಸುಧಾರಣೆ.

ಮಕರ
ಅತಿಯಾದ ಭಾವುಕತೆ ನೆಮ್ಮದಿ ಹಾಳು ಮಾಡುತ್ತದೆ. ಇದು ನಿಮಗೂ ಅನ್ವಯ. ಕೆಲವು ವಿಷಯಗಳಲ್ಲಿ ಮನಸ್ಸು ದೃಢವಾಗಿರಲಿ. ಸಮಚಿತ್ತ ಇರಲಿ.

ಕುಂಭ
ತರ್ಕ ಮತ್ತು ಭಾವನೆಯ ಮಧ್ಯೆ ಸಮತೋಲನ ಸಾಸಿ. ಸಿಕ್ಕಿದ್ದಕ್ಕೆಲ್ಲಾ ಹಣ ಖರ್ಚು ಮಾಡಬೇಡಿ. ಮತ್ತೆ ಪಶ್ಚಾತ್ತಾಪ ಪಡಬೇಕಾದೀತು.

ಮೀನ
ವೃತ್ತಿಯಲ್ಲಿನ ಒತ್ತಡ ಇಂದು ತುಸು ಕಡಿಮೆಯಾಗುವುದು. ಕಾರ್ಯಸಿದ್ಧಿ. ಮನೆಯಲ್ಲಿನ ಬಿಕ್ಕಟ್ಟು ಕೂಡ ಪರಿಹಾರ. ನೆಮ್ಮದಿಯ ದಿನ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss