Wednesday, August 10, 2022

Latest Posts

ದಿನ ಭವಿಷ್ಯ: ಈ ರಾಶಿಯವರಿಗೆ ಇಂದು ಹದಗೆಟ್ಟ ಸಂಬಂಧ ಸುಧಾರಿಸುವುದು

ದಿನ ಭವಿಷ್ಯ: 02.11.201

ಮೇಷ
ಸಂತೋಷದ ಮನಸ್ಥಿತಿ. ಇದೇ ಸಂತೋಷವನ್ನು ಇತರರಿಗೂ ಹಂಚುತ್ತೀರಿ. ನಿಮ್ಮ ಕಾರ್ಯವು ಇತರರ ಮೆಚ್ಚುಗೆಗೆ ಪಾತ್ರ ಆಗುವುದು.

ವೃಷಭ
ಕೆಲಸದಲ್ಲಿನ ಸಮಸ್ಯೆ ಪರಿಹರಿಸುವಲ್ಲಿ ಯಶಸ್ಸು ಕಾಣುವಿರಿ. ಆರೋಗ್ಯದ ಕಡೆ ತುಸು ಗಮನ ಕೊಡಿ. ವಿದ್ಯಾರ್ಥಿಗಳಿಗೆ ಸಮಸ್ಯೆ ಕಾಡುವುದು.

ಮಿಥುನ
ಕುಟುಂಬಸ್ಥರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ. ನಡೆನುಡಿ ಇತರರ ಮೇಲೆ ಪ್ರಭಾವ ಬೀರುವಂತಿರಲಿ. ಕೆಟ್ಟ ಮಾತಿನಿಂದ ಸಂಬಂಧ ಕೆಡಬಹುದು, ಎಚ್ಚರ.

ಕಟಕ
ಅಧಿಕಾರಕ್ಕಾಗಿ ಸಂಘರ್ಷ ನಡೆಯಬಹುದು. ನಿಮ್ಮ ಮಿತಿ ನೋಡಿಕೊಂಡು ಕಾರ್ಯವೆಸಗಿ. ಅವಮಾನಕ್ಕೆ ಈಡಾಗದಿರಿ. ಇತರರ ನೆರವು ಲಭಿಸದು.

ಸಿಂಹ
ಹಳೆಯ ನೆನಪುಗಳು ಕಾಡಬಹುದು. ಆತ್ಮೀಯರ ಸಂಗದಲ್ಲಿ ಸಂತೋಷ ಕಾಣುವಿರಿ. ಹೆಚ್ಚು ಆದಾಯ ಗಳಿಕೆಗೆ ಮನ ಮಾಡುವಿರಿ. ಅದರಲ್ಲಿ  ಸಫಲತೆ.

ಕನ್ಯಾ
ಹದಗೆಟ್ಟ ಸಂಬಂಧ ಸುಧಾರಿಸುವುದು. ಹೆತ್ತವರು ಮಕ್ಕಳ ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಸಣ್ಣಪುಟ್ಟ ಸಮಸ್ಯೆ ಕಾಡಬಹುದು. ಖರ್ಚು ಹೆಚ್ಚಳ.

ತುಲಾ
ಹಣ ಹೂಡಿಕೆಯ ವಿಚಾರದಲ್ಲಿ ಎಚ್ಚರದಿಂದ ಹೆಜ್ಜೆಯಿಡಿ. ಯಾರದೋ ಮಾತು ಕೇಳಿ ತಪ್ಪು ಹೆಜ್ಜೆ ಇಡಬೇಡಿ. ಕೌಟುಂಬಿಕ ವಾಗ್ವಾದ ನಡೆದೀತು.

ವೃಶ್ಚಿಕ
ಸಹೋದ್ಯೋಗಿಗಳ ಜತೆ ಕೆಲಸ ಮಾಡುವಾಗ ಎಚ್ಚರದಿಂದಿರಿ. ಎಲ್ಲರೂ ನಿಮ್ಮ ಕುರಿತು ಸದುದ್ದೇಶ ಹೊಂದಿರುವುದಿಲ್ಲ. ನಿಮ್ಮನ್ನು ಇಕ್ಕಟ್ಟಿಗೆ ತಳ್ಳಲು ಯತ್ನ ನಡೆಯಬಹುದು.

ಧನು
ಮನೆಯಲ್ಲಿ ಸಂಘರ್ಷವನ್ನು ತಪ್ಪಿಸಿ. ಸಹನೆಯಿಂದ ವರ್ತಿಸಿ. ಕಠಿಣ ಕಾರ್ಯ ನಿಮ್ಮ ಉತ್ಸಾಹ ಕುಂದಿಸಬಹುದು. ಆರ್ಥಿಕ ಒತ್ತಡ.

ಮಕರ
ಇತರರ ಪ್ರಭಾವದಿಂದ ಶಾಪಿಂಗ್ ತೆರಳಬೇಡಿ. ಜೇಬಿಗೆ ಕತ್ತರಿ ಬಿದ್ದೀತು. ಪ್ರಮುಖ ವಿಷಯದಲ್ಲಿ ಕಾರ್ಯವೆಸಗದೆ ಆಲಸ್ಯ ತೋರುವಿರಿ. ಅದು ಸರಿಯಲ್ಲ.

ಕುಂಭ
ವೃತ್ತಿಯ ಗುರಿ ಈಡೇರಿಸಲು ಕಠಿಣ ಶ್ರಮ ಅವಶ್ಯ. ಸುಲಭದಲ್ಲೆ ಎಲ್ಲ ಆಗಬೇಕು ಎಂಬ ಮನೋಭಾವ ತ್ಯಜಿಸಿ. ಆಪ್ತರ ಸಹಕಾರ.

ಮೀನ
ಕೌಟುಂಬಿಕ ಸಾಮರಸ್ಯ. ಎಲ್ಲರ ಜತೆ ಹೊಂದಾಣಿಕೆ ಸಾಧಿಸುವಿರಿ. ದೊಡ್ಡ ಹೊಣೆಗಾರಿಕೆಯೊಂದು ಹೆಗಲ ಮೇಲಿಂದ ಕಳಚುವುದು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss