ದಿನ ಭವಿಷ್ಯ: 03.11.2021
ಮೇಷ
ಮನಸ್ಸಿನಲ್ಲಿ ಏನೋ ಖಾಲಿತನ. ಆಪ್ತರ ಜತೆಗಿದ್ದರೂ ಏನೋ ಕೊರಗು. ಕೌಟುಂಬಿಕ ಅಸಮಾಧಾನ. ಅಧ್ಯಾತ್ಮದತ್ತ ಮನಸ್ಸು ವಾಲಬಹುದು.
ವೃಷಭ
ಎಲ್ಲಾ ಕಾರ್ಯಗಳಲ್ಲೂ ಯಶಸ್ಸು. ವೃತ್ತಿಯಲ್ಲಿನ ಒತ್ತಡ ನಿವಾರಣೆ. ಕೌಟುಂಬಿಕ ಪರಿಸರ ಸಮಾಧಾನಕರ. ಎಲ್ಲರ ಜತೆ ಉತ್ತಮ ಹೊಂದಾಣಿಕೆ.
ಮಿಥುನ
ಇಂದು ಎಲ್ಲ ವಿಷಯಗಳಲ್ಲೂ ಹೊಂದಾಣಿಕೆಯಿಂದ ವರ್ತಿಸಿ. ನಿಮ್ಮದೇ ನಿಲುವಿಗೆ ಪಟ್ಟು ಹಿಡಿಯದಿರಿ. ಕೌಟುಂಬಿಕ ಸಾಮರಸ್ಯ.
ಕಟಕ
ನಿಮ್ಮ ಆಪ್ತರ ವಲಯದಲ್ಲಿ ಹೆಚ್ಚು ಸಮಯ ಕಳೆಯುವ ಅವಕಾಶ. ಬಂಧುಮಿತ್ರರ ಭೇಟಿ. ಸಂತೋಷ, ಮೋಜಿನಲ್ಲಿ ದಿನ ಕಳೆಯುವಿರಿ.
ಸಿಂಹ
ಕೆಲವು ವಿಷಯಗಳಲ್ಲಿ ಹೆಚ್ಚು ಪ್ರಯತ್ನ ಪಟ್ಟರಷ್ಟೇ ನಿಮಗೆ ಯಶಸ್ಸು. ಆಲಸ್ಯ ಬಿಟ್ಟುಬಿಡಿ. ಕಾರ್ಯಕ್ಕೆ ಹೆಚ್ಚು ಗಮನ ಕೊಡಿ. ಖರ್ಚು ಹೆಚ್ಚಳ.
ಕನ್ಯಾ
ಸಂತೋಷದ ದಿನ. ಮನೆಯಲ್ಲಿ ಸಂಭ್ರಮದ ವಾತಾವರಣ. ಕೆಲವು ಸಮಸ್ಯೆ ಕಾಡಿದರೂ ಇಂದು ಅದು ನಗಣ್ಯವೆನಿಸುವುದು. ಆರ್ಥಿಕ ಒತ್ತಡ.
ತುಲಾ
ಫಲಾಫಲ ಅಪೇಕ್ಷಿಸದೆ ನಿಮ್ಮ ಕೆಲಸ ಮಾಡಿ. ಇದು ಇಂದು ನಿಮಗೂ ಅನ್ವಯ. ಮಾಡಿದ ಕಾರ್ಯಕ್ಕೆ ಬಯಸಿದ ಫಲ ಸಿಗದು. ಆದರೆ ನಿರಾಶೆ ಉಂಟಾಗದು.
ವೃಶ್ಚಿಕ
ಮುಂಜಾನೆಯ ಅವಧಿಯಲ್ಲಿ ಕೆಲವು ಸಮಸ್ಯೆ ಎದುರಿಸುವಿರಿ. ಅದನ್ನು ನಿಭಾಯಿಸುವುದರಲ್ಲೆ ಸಮಯ ವ್ಯಯ. ಅಪರಾಹ್ನ ಎಲ್ಲವೂ ಸುಸೂತ್ರವಾಗುವುದು.
ಧನು
ಸಮಸ್ಯೆ ಪರಿಹರಿಸು ವುದು ನಿಮಗೆ ಕಷ್ಟದ ಕೆಲಸವಲ್ಲ. ಆದರೆ ಕೆಲವರ ಅಸಮಾಧಾನ ತಣಿಸುವುದು ಕಷ್ಟವಾಗಲಿದೆ. ಚಿಂತೆ ಕಾಡುವುದು.
ಮಕರ
ಅವಿವಾಹಿತರಿಗೆ ಸೂಕ್ತ ಸಂಬಂಧ ಕೂಡಿಬರುವುದು. ಕೌಟುಂಬಿಕ ಪರಿಸರದಲ್ಲಿ ಹೆಚ್ಚು ಸಂತೋಷ ಕಾಣುವಿರಿ. ಖರ್ಚು ತುಸು ಹೆಚ್ಚಳ.
ಕುಂಭ
ಇತರರ ಸಲಹೆ ಕೇಳಿ ತಪ್ಪು ನಿರ್ಧಾರ ತಾಳಬೇಡಿ. ನಿಮ್ಮದೇ ವಿವೇಕವನ್ನು ಅನುಸರಿಸಿ. ಕುಟುಂಬಸ್ಥರ ಹಿತಾಸಕ್ತಿಗೆ ಗಮನ ಕೊಡಿ. ಅವರನ್ನು ಕಡೆಗಣಿಸಬೇಡಿ.
ಮೀನ
ಫಲಪ್ರದ ದಿನ. ಬಂಧುಗಳ ಭೇಟಿ. ಕಾರ್ಯವೊಂದು ನಿರೀಕ್ಷಿತ ಫಲಿತಾಂಶ ನೀಡಲಿದೆ. ಇದರಿಂದ ಚಿಂತೆ ನಿವಾರಣೆ, ನಿರಾಳತೆ.