Monday, July 4, 2022

Latest Posts

ದಿನ ಭವಿಷ್ಯ: ಕುಟುಂಬ ಸಮಸ್ಯೆಯ ಪರಿಹಾರದ ಬಗ್ಗೆ ಹೆಚ್ಚು ಗಮನ ಕೊಡಿ

ದಿನ ಭವಿಷ್ಯ: 30.11.2021

ಮೇಷ
ಪ್ರೀತಿಪಾತ್ರರ ವರ್ತನೆ ಯಲ್ಲಿ ಬದಲಾವಣೆ ಕಂಡುಬಂದೀತು. ಇದರಿಂದ ಮನಸ್ಸಿಗೆ ಆತಂಕ. ಆದರೆ ನಿಜವಾಗಿ ಆತಂಕ ಪಡುವ ಅಗತ್ಯವಿಲ್ಲ.

ವೃಷಭ
ಕಾರ್ಯಸಿದ್ಧಿ. ಇದರಿಂದ ಧನಲಾಭ. ವೃತ್ತಿಯಲ್ಲಿ ಉನ್ನತಿ.  ಕೌಟುಂಬಿಕ ಸಮಸ್ಯೆಯೊಂದು ಪರಿಹಾರ ಕಾಣುವುದು. ನವವಿವಾಹಿತರಿಗೆ ಶುಭ ಬೆಳವಣಿಗೆ.

ಮಿಥುನ
ನಿಮ್ಮ ನಾಯಕತ್ವ ಗುಣಕ್ಕೆ ಮನ್ನಣೆ ದೊರಕುವುದು. ದುಬಾರಿ ವಸ್ತು ಖರೀದಿ ಸಂಭವ. ಕೌಟುಂಬಿಕ ಸಮಾಧಾನ ಮತ್ತು ಸಹಕಾರ.

ಕಟಕ
ಹಣದ ವಿಷಯದಲ್ಲಿ ಲೆಕ್ಕಾಚಾರದಿಂದ ನಡಕೊಳ್ಳಿ. ಖರ್ಚು ಕಡಿಮೆ ಮಾಡಿ. ವೃತ್ತಿಗೆ ಸಂಬಂಧಿಸಿ ಮಹತ್ವದ ಬೆಳವಣಿಗೆ ಸಂಭವಿಸಬಹುದು.

ಸಿಂಹ
ಕುಟುಂಬದ ಸಮಸ್ಯೆ ಪರಿಹಾರಕ್ಕೆ ಹೆಚ್ಚು ಗಮನ ಕೊಡಿ. ಇಲ್ಲವಾದರೆ ಕೌಟುಂಬಿಕ ಶಾಂತಿ ಕದಡಬಹುದು.ಕೆಲವರಿಗೆ ವಿವೇಕ ತುಂಬುವ ಕೆಲಸ ಮಾಡಿ.

ಕನ್ಯಾ
ನಿಮ್ಮ ಪಾಲಿಗೆ ಅಚ್ಚರಿಯ ಬೆಳವಣಿಗೆ ಸಂಭವಿಸೀತು. ಸಂಬಂಧ ಗಟ್ಟಿಗೊಳ್ಳುವುದು. ಅನಿರೀಕ್ಷಿತ ವಲಯದಿಂದ ಶುಭ ಸುದ್ದಿ ಕೇಳುವಿರಿ.

ತುಲಾ
ಕೆಲಸದಲ್ಲಿ  ಯಶಸ್ಸು. ಸಣ್ಣ ವಿಷಯಗಳನ್ನು ದೊಡ್ಡದು ಮಾಡದಿರಿ. ಕೆಲವರ ಜತೆ ಎಷ್ಟು ಬೇಕೋ ಅಷ್ಟೇ ವ್ಯವಹರಿಸಿ. ಇಲ್ಲವಾದರೆ ಸಮಸ್ಯೆ ಉಂಟಾದೀತು.

ವೃಶ್ಚಿಕ
ನಿಮ್ಮ ಕೆಲವು ಕಾರ್ಯ ಕೆಲವರಿಂದ ಟೀಕೆಗೆ ಒಳಗಾಗಬಹುದು. ಆದರೆ ಅಂತಿಮವಾಗಿ ನಿಮ್ಮ ನಿಲುವನ್ನು ಎಲ್ಲರೂ ಒಪ್ಪಿಕೊಳ್ಳು ವರು. ಆರ್ಥಿಕ ಲಾಭ.

ಧನು
ಸಿಹಿಕಹಿ ನೆನಪುಗಳು ಕಾಡಬಹುದು. ಮುಖ್ಯ ವಿಚಾರದಲ್ಲಿ ಆತುರದ ನಿರ್ಧಾರ ಬೇಡ. ವಿವೇಚಿಸಿ ನಿರ್ಧಾರ ತಾಳಿ. ಕೆಲವರ ಸಲಹೆ ಪಡೆಯಿರಿ.

ಮಕರ
ನಿಮ್ಮ ಸಕಾರಾತ್ಮಕ ಚಿಂತನೆ ಮತ್ತು ಆತ್ಮವಿಶ್ವಾಸ ನಿಮ್ಮ ಕೆಲಸ ಸಫಲವಾಗುವಂತೆ ಮಾಡುವುದು. ಮಾನಸಿಕ ಬೇಗುದಿ ಕಡಿಮೆಯಾಗುವುದು.

ಕುಂಭ
ಮುಖ್ಯ ಕಾರ್ಯಕ್ಕೆ ಸಹೋದ್ಯೋಗಿಗಳ ಸಹಕಾರ ಲಭ್ಯ. ನಿಮಗೆ ಸರಿ ಎನಿಸದ ಕಾರ್ಯ ಮಾಡಲು ಹೋಗದಿರಿ. ಅದರಿಂದ ಮುಜುಗರ ತಪ್ಪಿಸಿಕೊಳ್ಳಬಹುದು.

ಮೀನ
ಆಪ್ತರೆನಿಸಿದ ವ್ಯಕ್ತಿಯೊಬ್ಬರು ಸಮಸ್ಯೆ ಸೃಷ್ಟಿಸಬಹುದು. ಹಾಗಾಗಿ ಎಲ್ಲರನ್ನೂ ಕುರುಡಾಗಿ ನಂಬಬೇಡಿ. ವಿವೇಚನೆ ಯಿಂದ ವರ್ತಿಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss