spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, January 28, 2022

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ..

- Advertisement -Nitte

ದಿನ ಭವಿಷ್ಯ: 08.12.201

ಮೇಷ: ಬಯಸಿದ ಉದ್ದೇಶ ಈಡೇರುವುದು. ಕೆಲವರಿಂದ ಮಾನಸಿಕ ಹಿಂಸೆ ಅನುಭವಿಸುವಿರಿ. ಅವರಿಗೆ ತಿರುಗೇಟು ನೀಡಲು ಹೋಗದಿರಿ. ಸಹನೆ ಕಾದುಕೊಳ್ಳಿ.

ವೃಷಭ:ವೃತ್ತಿಪರವಾಗಿ ಫಲಪ್ರದ ದಿನ. ಕಾರ್ಯ ಸಿದ್ಧಿ. ನೂತನ ಅವಕಾಶಗಳು ಒದಗುತ್ತವೆ. ಉಳಿತಾಯಕ್ಕೆ ಹೆಚ್ಚು ಆದ್ಯತೆ ಕೊಡಿ. ದುಂದು ವೆಚ್ಚ ನಿಯಂತ್ರಿಸಿ.

ಮಿಥುನ:ಕಾರ್ಯ ಸಾಫಲ್ಯ. ಸಹೋದ್ಯೋಗಿಗಳ ಸಹಕಾರ. ಸಂಗಾತಿ ಜತೆಗೆ ಉತ್ತಮ ಹೊಂದಾಣಿಕೆ. ಆರೋಗ್ಯಕ್ಕೆ ಸಂಬಂಧಿಸಿದ ಚಿಂತೆ ನಿವಾರಣೆ. ಆರ್ಥಿಕ ಚೇತರಿಕೆ.

ಕಟಕ: ಕೆಲಸಗಳು ಬಾಕಿ ಉಳಿಯುವುದಿಲ್ಲ. ಎಲ್ಲ ಕಾರ್ಯ ಮುಗಿಸುವಿರಿ. ಹಾಗಾಗಿ ಮನಸ್ಸಿಗೆ ನಿರಾಳತೆ. ಆರ್ಥಿಕ ಕೊರತೆಯೂ ಕಾಡದು. ಕೌಟುಂಬಿಕ ಸಮಾಧಾನ.

ಸಿಂಹ:ನಿಮ್ಮ ಶ್ರಮಕ್ಕೆ ಸಿಗುವ ಫಲ ತುಂಬಾ ನಿಧಾನ. ಹಾಗೆಂದು ಅವಸರ ತೋರದಿರಿ. ಯೋಜಿಸಿ ಕಾರ್ಯ ಎಸಗಿದರೆ ಒಳಿತು. ಕುಟುಂಬದಲ್ಲಿ ವಾಗ್ವಾದ ನಡೆದೀತು.

ಕನ್ಯಾ:ವೃತ್ತಿಯಲ್ಲಿ ಸಮಾಧಾನ ಕರ ಬೆಳವಣಿಗೆ. ಆದರೆ ಆರ್ಥಿಕವಾಗಿ ಸಮಾಧಾನ ಉಂಟಾಗದು. ಹಣದ ಕೊರತೆ ಕಾಡುವುದು. ಕೌಟುಂಬಿಕ ಅಸಂತೃಪ್ತಿ.

ತುಲಾ:ಎಲ್ಲದರಲ್ಲೂ ಯಶಸ್ಸು. ನಿಮ್ಮ ಪ್ರತಿಭೆ ಇತರರನ್ನು ಪ್ರೇರೇಪಿಸಬಹುದು. ವೃತ್ತಿಯಲ್ಲಿನ ಸವಾಲನ್ನು ನಿಭಾಯಿಸುವಿರಿ. ಮನೆಯಲ್ಲಿ ಅನವಶ್ಯ ವಾಗ್ವಾದ ನಡೆಸದಿರಿ.

ವೃಶ್ಚಿಕ:ಆತ್ಮೀಯರೊಂದಿಗೆ ಉತ್ತಮ ಬಾಂಧವ್ಯ. ಅದನ್ನು ಕೆಡಿಸಲು ಕೆಲವರಿಗೆ ಆಸ್ಪದ ಕೊಡಬೇಡಿ. ವದಂತಿಗಳಿಗೆ ಕಿವಿಗೊಡದಿರಿ.

ಧನು:ಕೆಲಸದಲ್ಲಿ ಅಧಿಕ ಒತ್ತಡ. ಹಾಗಾಗಿ ವಿವೇಚನೆಯಿಂದ ನಿರ್ಧಾರ ತಾಳುವುದು ಸಾಧ್ಯವಾಗದು. ಪ್ರಮುಖ ತೀರ್ಮಾನ ಮುಂದೂಡಿರಿ.

ಮಕರ:ಉದ್ಯೋಗದಲ್ಲಿ ಅಧಿಕ ಹೊಣೆಗಾರಿಕೆ. ಬೇಸರಿಸದೆ ಅದನ್ನು ನಿಭಾಯಿಸುವುದು ಒಳಿತು. ಇತರರ ಜತೆ ಸಂಘರ್ಷಕ್ಕೆ ಮುಂದಾಗಬೇಡಿ.

ಕುಂಭ:ಉದ್ದಿಮೆಯಲ್ಲಿ ಉತ್ತಮ ಫಲ. ಆರ್ಥಿಕ ಸುಧಾರಣೆ. ಮನೆಯಲ್ಲಿ ಹೆಚ್ಚಿನ ಹೊಣೆ ನಿಭಾಯಿಸಬೇಕು. ಕೆಲವರ ಅಸಹಕಾರ ರೋಷ ತರಿಸಬಹುದು.

ಮೀನ: ಖಾಸಗಿ ಬದುಕಿಗೆ ಹೆಚ್ಚಿನ ಗಮನ ಕೊಡಿ. ಹೆಚ್ಚೆಚ್ಚು ಹೊಣೆ ಹೇಗಲೇರುವುದು. ಕೆಲವರ ಅಸಂತೋಷ ಎದುರಿಸುವಿರಿ. ಸಹನೆ ಕಳಕೊಳ್ಳದಿರಿ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img

Don't Miss