spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, October 17, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಿನಭವಿಷ್ಯ| ಇಂದು ಈ ರಾಶಿಯವರಿಗೆ ಹೊಸ ಕನಸು, ಹೊಸ ಭರವಸೆ ಮೂಡುವ ದಿನವಾಗಲಿದೆ…

- Advertisement -Nitte

ಹೊಸದಿಗಂತ ಆನ್ಲೈನ್ ಡೆಸ್ಕ್:

ಮೇಷ
ನಿಮ್ಮ ಕಾರ್ಯಗಳು ಇಂದು ನಿಮಗೆ ಜನಪ್ರಿಯತೆ ತಂದುಕೊಡುವವು. ಇತರರಿಗೆ ನೆರವು ನೀಡುವಿರಿ. ಖರ್ಚು ಅಧಿಕವಾಗಬಹುದು.

ವೃಷಭ
ಅನವಶ್ಯವಾಗಿ ಎಲ್ಲರೊಂದಿಗೆ ಕಠಿಣವಾಗಿ ವರ್ತಿಸದಿರಿ. ಮೃಧು ದೋರಣೆಯು ಸಮಸ್ಯೆ ಪರಿಹಾರಕ್ಕೆ ನೆರವು ನೀಡುವುದು.
ಸಹನೆ ಇರಲಿ.

ಮಿಥುನ
ಮುಂಜಾನೆಯಿಡೀ ಮನಸ್ಸು ಅಸ್ತವ್ಯಸ್ತ. ಸಮಸ್ಯೆಗಳು ಕಾಡುವುವು. ಸಂಜೆ ವೇಳೆಗೆ ಸಮಸ್ಯೆ ಪರಿಹಾರ ಕಾಣುತ್ತವೆ. ಮನಸ್ಸು ನಿರಾಳ.

ಕಟಕ
ಇಂದು ಮೊದಲಿಗೆ ಸೋಲು ಹಾಗೂ ಬಳಿಕ ಗೆಲುವನ್ನು ಅನುಭವಿಸುತ್ತೀರಿ. ಮನ ಕವಿದಿದ್ದ ಆತಂಕ ದೂರವಾಗುವುದು. ನಿಶ್ಚಿಂತರಾಗಿರಿ.

ಸಿಂಹ
ದಿನವಿಡೀ ಮನಸ್ಸಿಗೆ ಕಿರಿಕಿರಿ. ನಿಶ್ಚಿತ ಕಾರಣ ವಿಲ್ಲದೇ ಪ್ರತಿಯೊಬ್ಬರ ಮಾತಿಗೂ ಸಿಡುಕುತ್ತೀರಿ. ಮನಸ್ಸಿಗೆ ಸಮಾಧಾನ ತಂದುಕೊಳ್ಳಿ.

ಕನ್ಯಾ
ಭಾವನಾತ್ಮಕ ಸನ್ನಿವೇಶ. ವ್ಯಕ್ತಿಯೊಬ್ಬರ ಕುರಿತಾದ ಅಸಹನೆಯು ಸ್ಫೋಟಗೊಳ್ಳಬಹುದು. ಆತ್ಮೀಯರ ಸಂಗದಲ್ಲಿ ಮನಸ್ಸು ತಹಬಂದಿಗೆ ಬರುತ್ತದೆ.

ತುಲಾ
ಕೆಲವು ವಿಷಯಗಳಲ್ಲಿ ಅವಸರ ಕೂಡದು. ತಾಳ್ಮೆಯಿಂದ ಕಾಯುವುದೇ ನೀವಿಂದು ಅನುಸರಿಸಬೇಕಾದ ದಾರಿ. ದೃಢ ಚಿತ್ತರಾಗಿರಿ.

ವೃಶ್ಚಿಕ
ಕೆಲ ಸಮಯದಿಂದ ಗೊಂದಲಗೊಂಡಿದ್ದ ಮನಸ್ಸು ಇಂದು ಸಮಾಧಾನ ಗೊಳ್ಳುವುದು. ಸಮಸ್ಯೆಗೆ ಸ್ಪಷ್ಟ ಪರಿಹಾರ ಕಂಡುಕೊಳ್ಳುವಿರಿ.

ಧನು
ಹೊಸತನ ತುಂಬಿದ ದಿನ. ಹೊಸ ಕನಸು, ಹೊಸ ಭರವಸೆ. ನಿಮ್ಮ ವ್ಯಕ್ತಿತ್ವ ಅರಳಿಸಲು ಬೇಕಾಗುವ ಬೆಳವಣಿಗೆ ಸಂಭವಿಸುವುದು. ಆರ್ಥಿಕವಾಗಿ ಸದೃಢ.

ಮಕರ
ಇಂದಿನ ದಿನ ನಿಮಗೆ ವಿಭಿನ್ನವೆನಿಸಲಿದೆ. ಏಕತಾನತೆಯ ಕೆಲಸದ ಬದಲಾಗಿ ಹೊಸ ಕಾರ್ಯ, ಹೊಸ ಹೊಣೆ ಹೆಗಲೇರಲಿದೆ. ಉತ್ಸಾಹಕ್ಕೆ ಭಂಗವಿಲ್ಲ.

ಕುಂಭ
ಬೆಳಿಗ್ಗೆಯೆ ಕುಟುಂಬ ಸದಸ್ಯರಿಂದ ಕಿರಿಕಿರಿ ಅನುಭವಿಸುವಿರಿ. ಆದರೆ ನಂತರ ದಿನವಿಡೀ ಉತ್ಸಾಹ, ಸಂಭ್ರಮದಿಂದಲೆ ಕಳೆಯುವುದು.

ಮೀನ
ಕೌಟುಂಬಿಕ ಸಂಬಂಧ ಗಟ್ಟಿಗೊಳ್ಳಲಿದೆ. ಹೊಸ ಕಾರ್ಯಕ್ಕೆ ಉತ್ಸಾಹದಿಂದ ಧುಮುಕುವಿರಿ. ಕಚೇರಿಯಲ್ಲಿ ಎಲ್ಲ ಕಾರ್ಯ ಸಲೀಸು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss