ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Friday, August 6, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ದಾಂಡೇಲಿ ತಾಲೂಕಿಲ್ಲಿ ಮಳೆಯ ಆರ್ಭಟ: ಮುಳುಗಡೆಯತ್ತ ಸೇತುವೆ!

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………

ಹೊಸ ದಿಗಂತ ವರದಿ,ದಾಂಡೇಲಿ:

ತಾಲೂಕಿನಾದ್ಯಂತ ಗುರುವಾರ ಸುರಿದ ಧಾರಾಕಾರ ಮಳೆಗೆ ಹಳೆ ದಾಂಡೇಲಿಯಲ್ಲಿ ಕಾಳಿ ನದಿಗೆ ಕಟ್ಟಲಾಗಿರುವ ಸೇತುವೆ ಮುಳುಗಡೆ ಆಗುವ ಹಂತಕ್ಕೆ ತಲುಪಿದೆ. ಕಾಳಿ ನದಿಯ ಜಲಾನಯನ ಪ್ರದೇಶದಲ್ಲಿ ಕಳೆದೆರಡು ದಿನಗಳಿಂದ ವ್ಯಾಪಕ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಅಷ್ಟ ದಿಕ್ಕುಗಳಿಂದ ಹರಿದು ಬರುತ್ತಿರುವ ಭಾರಿ ಪ್ರಮಾಣದ ನೀರಿನಿಂದಾಗಿ ಕಾಳಿ ನದಿಯ ನೀರಿನ ಮಟ್ಟದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಹಳೆ ದಾಂಡೇಲಿಯ ಸೇತುವೆ ಮೇಲಿನಿಂದ ನೀರು ಹಾದುಹೋಗಲು ಇನ್ನೂ ಕೇವಲ ಎರಡು ಅಡಿಗಳಷ್ಟು ಮಾತ್ರ ಬಾಕಿ ಇದ್ದು, ಮಳೆ ಹಿಗೆಯ ಮುಂದುವರೆದರೆ ಸೇತುವೆ ಮುಳುಗಡೆ ಆಗುವ ಸಾದ್ಯತೆ ಇದೆ. 2019 ರಲ್ಲಿ ಸೇತುವೆ ಸಂಪೂರ್ಣವಾಗಿ ಮುಳುಗಡೆ ಆಗಿದ್ದರಿಂದ ನೀರು ಹಲವರ ಮನೆಗೆ ನುಗ್ಗಿ ಪ್ರವಾಹ ಸೃಷ್ಟಿಯಾಗಿತ್ತು. ನಗರಾಡಳಿತದಿಂದ ನಿರಾಶ್ರಿತರಿಗಾಗಿ ಅಲ್ಲಲ್ಲಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿತ್ತು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss