ಭಾರೀ ಮಳೆಗೆ ತುಂಬಿ ಹರಿದ ದರ್ಪಣತೀರ್ಥ ನದಿ: ಆದಿಸುಬ್ರಹ್ಮಣ್ಯದೇಗುಲಕ್ಕೆ ಪ್ರವೇಶಿಸಿದ ನೀರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಸುರಿದ ಬಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಬ್ರಹ್ಮಣ್ಯದ ದರ್ಪಣತೀರ್ಥ ನದಿಯು ತುಂಬಿ ಹರಿಯಿತು.ಇದರಿಂದಾಗಿ ಆದಿಸುಬ್ರಹ್ಮಣ್ಯ ದೇವಳದ ಒಳಗೆ ನೀರು ಪ್ರವೇಶಿಸಿತು.ಅನೇಕ ವರ್ಷಗಳ ನಂತರ ಆದಿ ದೇವಳದ ಒಳಗೆ ದರ್ಪಣ ತೀರ್ಥವು ಪ್ರವೇಶಿಸಿದ್ದು ಅಚ್ಚರಿಯಾಗಿತ್ತು.ಶ್ರೀ ದೇವಳದ ಒಳಾಂಗಣ, ಹೊರಾಂಗಣವು ಸಂಪೂರ್ಣವಾಗಿ ಜಲಾವೃತ್ತಗೊಂಡಿತ್ತು.

ಸೋಮವಾರ ಮದ್ಯಾಹ್ನ ದಿಂದ ಸುರಿಯುತ್ತಿರುವ ಬಾರೀ ಮಳೆಗೆ ಸುಳ್ಯ- ಸುಬ್ರಹ್ಮಣ್ಯ ಸಂಪರ್ಕಿಸುವ ಕಲ್ಲಾಜೆ ಸೇತುವೆಯು ಮುಳುಗಡೆಗೊಂಡು ಸಂಚಾರ ಸ್ಥಗಿತಗೊಂಡಿತ್ತು.ಕಲ್ಲಾಜೆ ಹೊಳೆಯಲ್ಲಿ ಭಾರೀ ಪ್ರವಾಹ ಹರಿದು ಬಂದು ಸೇತುವೆ ಮುಳುಗಿತ್ತು.ಇದರಿಂದಾಗಿ ಕಲ್ಲಾಜೆ- ಕುಜುಂಬಾರು ಸಂಪರ್ಕ ರಸ್ತೆ ಯು ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿತ್ತು.ಅಲ್ಲದೆ ಪ್ರವಾಹದಿರ ಮರಕತ- ಯೇನೆಕಲ್ಲು ಸಂಪರ್ಕ ರಸ್ತೆಯು ಕೂಡಾ ಜಲಾವೃತವಾಗಿತ್ತು.ಬಾರೀ ಮಳೆಯಿಂದ ಹರಿಹರ-ಕೊಲ್ಲಮೊಗ್ರ ಸಂಪರ್ಕ ರಸ್ತೆಯು ಜಲಾವೃತಗೊಂಡು ಸಂಪರ್ಕ ಕಡಿತಗೊಂಡಿತ್ತು.

ಭಾರೀ ಮಳೆ
ಸೋಮವಾರ 2 ಗಂಟೆಯಿಂದ ನಿರಂತರವಾಗಿ ರಾತ್ರಿಯ ತನಕ ಬಾರೀ ಮಳೆ ಸುರಿಯಿತು.ಇದರಿಂದಾಗಿ ಸುಬ್ರಹ್ಮಣ್ಯ, ಕೊಲ್ಲಮೊಗ್ರು, ಹರಿಹರ, ದೇವರ ಹಳ್ಳಿ ಪರಿಸರದಲ್ಲಿ ಭಾರೀ ಮಳೆಯಾಯಿತು.ಇದರಿಂದ ಕೊಲ್ಲಮೊಗ್ರು, ಹರಿಹರ ಹೊಳೆಗಳು ತುಂಬಿ ಹರಿದು ಹರಿಹರಮತ್ತು ಕೊಲ್ಲಮೊಗ್ರು ಗಳಲ್ಲಿ ಸೇತುವೆ ಮುಳುಗಡೆಗೊಂಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!