ಹೊಸದಿಗಂತ ಡಿಜಿಟಲ್ ಡೆಸ್ಕ್:
ಪವಿತ್ರಾ ಗೌಡ ಜೊತೆ ನಾನು 10 ವರ್ಷಗಳಿಂದ ಲಿವ್ ಇನ್ ರಿಲೇಷನ್ ಶಿಪ್‌ನಲ್ಲಿ ಇದ್ದೇನೆ ಎಂದು ನಟ ದರ್ಶನ್ ಹೇಳಿದ್ದಾರೆ ಎನ್ನಲಾಗಿದೆ.
ಪವಿತ್ರಾಗೌಡ ಜೊತೆ ಸುಮಾರು 10 ವರ್ಷಗಳಿಂದ ನಾನು ಲೀವ್ ಇನ್ ರಿಲೇಷನ್‌ಷಿಪ್‌ನಲ್ಲಿದ್ದೇನೆ. ಪವಿತ್ರಾ ಗೌಡ ಆರ್‌ಆರ್‌ನಗರದಲ್ಲಿನ ನನ್ನ ಮೇಲಿನ ವಿಳಾಸದ ಮನೆಯಿಂದ ಸುಮಾರು ಒಂದುವರೆ ಕಿಲೋ ಮೀಟರ್ ದೂರದಲ್ಲಿ ನೆಲೆಸಿದ್ದಾರೆ ಎಂದು ದರ್ಶನ್ ಚಾರ್ಜ್‌ಶೀಟ್‌ನಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ನನಗೆ ಜೆಟ್‌ಲ್ಯಾಗ್ ಪಬ್‌ನ ಮಾಲೀಕರಾದ ದಿವಂಗತ ಸೌಂದರ್ಯ ಜಗದೀಶ್ ಅವರು ಸುಮಾರು 10 ವರ್ಷ ಗಳಿಂದ ಪರಿಚಯವಿದ್ದಾರೆ. 2018 ರಲ್ಲಿ ನಾನು ಪವಿತ್ರಾ ಗೌಡಗೆ ಮನೆಯನ್ನು ಖರೀದಿಸಲು ಸ್ನೇಹಿತರಾದ ಸೌಂದರ್ಯ ಜಗದೀಶ್ ಅವರಿಂದ 1.75 ಕೋಟಿ ರೂ. ಸಾಲವನ್ನು ಪಡೆದಿದ್ದೆ.
ಈ ಹಣವನ್ನು ನಾನು ಪವಿತ್ರಾ ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆ ಮಾಡಿದ್ದೆ. ಈ ಸಾಲದ ಹಣವನ್ನು 2 ವರ್ಷದ ಹಿಂದೆ ಸೌಂದರ್ಯ ಜಗದೀಶ್ ಅವರಿಗೆ ನನ್ನ ಬ್ಯಾಂಕ್ ಖಾತೆಯಿಂದ ವರ್ಗಾವಣೆ ಮಾಡಿರುತ್ತೇನೆ. ಈ ಹಣ ಸಿನಿಮಾ ನಟನೆಗೆ ಪಡೆದ ಸಂಭಾವನೆಯಾಗಿರುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.