ದರ್ಶನ್‌ಗೋಸ್ಕರ ಪೂಜೆ ಅಂದಿದ್ರೆ ಗ್ಯಾರೆಂಟಿ ಬರ್ತಿರ್ಲಿಲ್ಲ: ಜಗ್ಗೇಶ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಕನ್ನಡ ಚಿತ್ರರಂಗದ ಬಹುತೇಕ ಕಲಾವಿದರು ಸೇರಿ ಚಾಮರಾಜಪೇಟೆಯಲ್ಲಿ ಇರುವ ಕಲಾವಿದರ ಸಂಘದ ಕಟ್ಟಡದಲ್ಲಿ ಪೂಜೆ, ಹೋಮ ಮುಂತಾದ್ದನ್ನು ಮಾಡಿದ್ದಾರೆ.

ಇದೇ ವೇಳೆ ನಟ ದರ್ಶನ್​ ಅವರು ಕೊಲೆ ಆರೋಪದಲ್ಲಿ ಜೈಲು ಸೇರಿರುವುದು ಕನ್ನಡ ಚಿತ್ರರಂಗದ ಪಾಲಿಗೆ ಬೇಸರದ ಸಂಗತಿ. ಅವರಿಗೆ ಕಾನೂನಿನ ಕಂಟಕ ಎದುರಾಗಿದೆ. ಆ ಸಲುವಾಗಿಯೇ ಕಲಾವಿದರ ಸಂಘದಲ್ಲಿ ಪೂಜೆ, ಹೋಮ ಮಾಡಲಾಗಿದೆ ಎಂಬ ಅನುಮಾನ ಕೆಲವರಿಗೆ ಇದೆ. ಆ ಪ್ರಶ್ನೆಗೆ ನಟ ಜಗ್ಗೇಶ್​ ಅವರು ಉತ್ತರಿಸಿದ್ದಾರೆ.

ನನಗೆ ಕೂಡ ಆರಂಭದಲ್ಲಿ ಅದೇ ರೀತಿಯ ಮಾಹಿತಿ ಬಂತು. ದರ್ಶನ್​ಗಾಗಿ ಪೂಜೆ ಆಗಿದ್ದರೆ ನಾನು ಕೂಡ ಬರುತ್ತಿರಲಿಲ್ಲ. ಅದು ಬೇರೆ ಆಯಾಮ ಪಡೆದುಕೊಳ್ಳುತ್ತಿತ್ತು. ಆದರೆ ಇದು ಅದಲ್ಲ. ಕಲಾವಿದರ ಒಳಿತಿಗಾಗಿ ಈ ಪೂಜೆ ನಡೆದಿದೆ. ಕೆಲವರಿಗೆ ಮಾಹಿತಿ ಕೊರತೆ ಆಗಿರಬಹುದು. ಹಾಗಾಗಿ ಅಪಾರ್ಥ ಮಾಡಿಕೊಂಡಿದ್ದಾರೆ. ಅನೇಕರು ಬೇರೆ ವಲಯಗಳಿಂದ ನನಗೆ ಫೋನ್​ ಮಾಡಿ ಕೇಳಿದರು. ನನಗೂ ಅನುಮಾನ ಬಂತು. ವಿಚಾರಿಸಿದಾಗ ಆ ಥರ ಅಲ್ಲ ಎಂಬುದು ಗೊತ್ತಾದಮೇಲೆ ನಾನು ಕೂಡ ಬಂದೆ ಎಂದು ಜಗ್ಗೇಶ್​ ಹೇಳಿದ್ದಾರೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!