Saturday, August 13, 2022

Latest Posts

ಶಾಲಾ ಮಕ್ಕಳಿಗೆ ಅ.10 ರಿಂದ ದಸರಾ ರಜೆ ಶುರು : ಬೇಸಿಗೆ ರಜೆ ಯಾವಾಗ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೊರೋನಾ ಭೀತಿಯ ನಡುವೆಯೂ 6-10ನೇ ತರಗತಿವರೆಗೆ ಭೌತಿಕವಾಗಿ ತರಗತಿಗಳು ಆರಂಭವಾಗಿವೆ.
ಇಲ್ಲಿಯವರೆಗೂ ಆನ್‌ಲೈನ್ ಕ್ಲಾಸ್ ಕೇಳುತ್ತಾ ಮನೆಯಲ್ಲಿದ್ದ ವಿದ್ಯಾರ್ಥಿಗಳಿಗೆ ಇದೀಗ ಮತ್ತೆ ಶಾಲೆ ವಾತಾವರಣ ಕೈಬೀಸಿ ಕರೆದಿದೆ. ಈಗಷ್ಟೇ ತರಗತಿಗಳು ಆರಂಭವಾಗಿರುವ ಹಿನ್ನೆಲೆ ದಸರಾ ರಜೆ, ಬೇಸಿಗೆ ರಜೆ ಇದೆಯೋ ಇಲ್ಲವೋ ಎಂದು ವಿದ್ಯಾರ್ಥಿಗಳು ಗೊಂದಲದಲ್ಲಿದ್ದರು.
ಈ ಗೊಂದಲಕ್ಕೆ ತೆರೆ ಬಿದ್ದಿದ್ದು, ಅ.10ರಿಂದ 20 ರವರೆಗೆ ದಸರಾ ರಜೆ ಸಿಗಲಿದೆ. ಇದು ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ, ಖಾಸಗಿ, ಅನುದಾನರಹಿತ ಶಾಲೆಗಳಿಗೆ ಅನ್ವಯವಾಗಲಿದೆ. ಅಂತೆಯೇ 2022ರ ಮೇ. 1ರಿಂದ 28ರವರೆಗೆ ಬೇಸಿಗೆ ರಜೆ ಇರಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss