ಸೆನ್ಸಾರ್​ನಿಂದ ಬರೋಬ್ಬರಿ 36 ಕಟ್ ಪಡೆದ ಮೊದಲ ಸಿನಿಮಾ ದಸರ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :

ನಾನಿ (Nani), ಕೀರ್ತಿ ಸುರೇಶ್ (Keerthy Suresh) ನಟನೆಯ ದಸರ (Dasara) ಸಿನಿಮಾ ಬಿಡುಗಡೆಗೆ ರೆಡಿಯಾಗಿದ್ದು,ಆದರೆ ಅದಕ್ಕೆ ಮುನ್ನ ದೊಡ್ಡ ಆಘಾತವೊಂದು ಚಿತ್ರತಂಡಕ್ಕೆ ಎದುರಾಗಿದೆ.

ಅದೆಂದರೆ ಸೆನ್ಸಾರ್ ಮಂಡಳಿಯು ಬರೋಬ್ಬರಿ 36 ಕಟ್​ಗಳನ್ನು ಸೂಚಿಸಿದೆ. ಮಾತ್ರವಲ್ಲದೆ ಕೆಲವು ಮುಖ್ಯ ಸೂಚನೆಗಳನ್ನು ಸಹ ಚಿತ್ರತಂಡಕ್ಕೆ ನೀಡಿದೆ.

ಸೆನ್ಸಾರ್​ನಿಂದ ಇಷ್ಟು ದೊಡ್ಡ ಸಂಖ್ಯೆಯ ಕಟ್ ಪಡೆದ ಮೊದಲ ಸಿನಿಮಾ ಎಂದ ಅಪಖ್ಯಾತಿಗೆ ದಸರ ಗುರಿಯಾಗಿದೆ.ದಸರ ಸಿನಿಮಾವು ಹಳ್ಳಿಯ ಒರಟು ಯುವಕನೊಬ್ಬನ ಕತೆಯಾಗಿದ್ದು, ಸಿನಿಮಾದಲ್ಲಿ ನಾಯಕನದ್ದು ವಿಪರೀತ ಕುಡಿಯುವ ಚಟ. ಬಹಳ ಒರಟು ಸ್ವಭಾವದ ನಾಯಕನ ಪಾತ್ರ ವಿಪರೀತ ವೈಯಲೆನ್ಸ್ ಅನ್ನು ಸಹ ತೆರೆಯ ಮೇಲೆ ಮಾಡುತ್ತದೆ. ಹಾಗಾಗಿಯೇ ಸೆನ್ಸಾರ್ ಮಂಡಳಿಯು ಇಷ್ಟೋಂದು ಕಟ್​ಗಳನ್ನು ಸೂಚಿಸಿದೆ ಎನ್ನಲಾಗಿದೆ.

ಒರಟು ಭಾಷೆ ಬಳಸಿದ ಕಡೆಯೂ ಕಟ್​ ಹಾಗೂ ಮ್ಯೂಟ್​ಗಳನ್ನು ಸೂಚಿಸಲಾಗಿದೆ. ಸಿನಿಮಾಕ್ಕೆ ಅಂತಿಮವಾಗಿ ಯು/ಎ ಸರ್ಟಿಫಿಕೇಟ್ ನೀಡಲಾಗಿದೆ.

ತೆಲಂಗಾಣದ ಸಿಂಗಾರೆನಿ ಎಂಬಲ್ಲಿನ ಕಲ್ಲಿದ್ದಲು ಗಣಿ, ಅಲ್ಲಿನ ಕಾರ್ಮಿಕರು ಅವರ ಬದುಕುಗಳನ್ನು ದಸರ ಸಿನಿಮಾದ ಕತೆ ಒಳಗೊಂಡಿದೆ. ಗಣಿಯ ಕಾರ್ಮಿಕನ ಪಾತ್ರದಲ್ಲಿ ನಾನಿ ನಟಿಸಿದ್ದಾರೆ. ಕೀರ್ತಿ ಸುರೇಶ್ ವೆನ್ನೆಲ ಹೆಸರಿನ ಹಳ್ಳಿ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾವನ್ನು ಶ್ರೀಕಾಂತ್ ಒಡೆಲ ನಿರ್ದೇಶನ ಮಾಡಿದ್ದಾರೆ. ಇದು ಅವರ ಮೊದಲ ಸಿನಿಮಾ. ಸಿನಿಮಾವನ್ನು ಸುಧಾಕರ್ ಚೆರುಕುರಿ ನಿರ್ಮಾಣ ಮಾಡಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾದ ಪ್ರಚಾರವನ್ನು ಬಹು ಜೋರಾಗಿ ಮಾಡುತ್ತಿದ್ದಾರೆ ನಟ ನಾನಿ. ಸಿನಿಮಾವು ಮಾರ್ಚ್ 30 ರಂದು ತೆರೆಗೆ ಬರಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!