ಸಾವಿರಾರು ಕೋಟಿ ವಂಚಕ ನೀರವ್‌ ಮೋದಿ ಅಸ್ತಿ ಹರಾಜಿಗೆ ಡೇಟ್ ಫಿಕ್ಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ದೇಶ ಬಿಟ್ಟು ಪರಾರಿಯಾಗಿರುವ ವಜ್ರ ಉದ್ಯಮಿ ನೀರವ್‌ ಮೋದಿ ಸಂಬಂಧಿಸಿದ ಆಸ್ತಿಯನ್ನು ಹರಾಜು ಹಾಕಲು ಸಾಲ ವಸೂಲಾತಿ ನ್ಯಾಯಮಂಡಳಿ-1(DRT-1) ಮುಂದಾಗಿದ್ದು,ಪುಣೆಯ ಅಪಾರ್ಟ್‌ಮೆಂಟ್‌ನಲ್ಲಿರುವ 398 ಚದರ ಮೀಟರ್ ಮತ್ತು 396 ಚದರ ಮೀಟರ್ ಅಳತೆಯನ್ನು ಹೊಂದಿರುವ ಫ್ಲ್ಯಾಟ್‌ ಮಾರಾಟಕ್ಕೆ ಸಿದ್ಧತೆ ನಡೆದಿದೆ.

ಇದ್ರ ಬೆಲೆ ರೂ 8.99 ಕೋಟಿ ರೂ. ಮತ್ತು ರೂ 8.93 ಕೋಟಿ ರೂ. ಎಂದು ನಿಗದಿಪಡಿಸಲಾಗಿದ್ದು, ಫೆಬ್ರವರಿ 3 ರಂದು ಹರಾಜು ಪ್ರಕ್ರಿಯೆ ನಡೆಯಲಿದೆ.

ನೀರವ್ ಮೋದಿ ಪಂಜಾಬ್ ನ್ಯಾಷನಲ್ ಬ್ಯಾಂಕ್‌ಗೆ 13 ಸಾವಿರ ಕೋಟಿ ರೂ. ವಂಚಿಸಿದ್ದು, ಇವರ ಜೊತೆ ಗೀತಾಂಜಲಿ ಜುವೆಲ್ಲರಿಯ ಮೆಹುಲ್ ಚೋಕ್ಸಿ(Mehul Choksi) ವಿರುದ್ಧ ಕೂಡ ಸಿಬಿಐ, ಇಡಿ ಪ್ರಕರಣ ದಾಖಲಿಸಿದೆ. ಪ್ರಕರಣ ಸಂಬಂಧ ಈಗಾಗಲೇ ಮುಂಬೈ ಸೇರಿದಂತೆ ವಿದೇಶದಲ್ಲಿರುವ ನೀರವ್ ಮೋದಿ ಆಸ್ತಿಯನ್ನು ತನಿಖಾ ಸಂಸ್ಥೆಗಳು ಮುಟ್ಟುಗೋಲು ಹಾಕಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!