ಅಂತರರಾಷ್ಟೀಯ ಅಬಕಾಸ್ ಸ್ಪರ್ಧೆಯಲ್ಲಿ ದೖತಿ ಪೂಜಾರಿ ಚಾಂಪಿಯನ್

ಹೊಸದಿಗಂತ ವರದಿ ಮಡಿಕೇರಿ:

ದುಬೈಯಲ್ಲಿ ನಡೆದ ಅಂತರರಾಷ್ಟ್ರೀಯ ಮಟ್ಟದ 8ನೇ ಬ್ರೈನೋ ಬ್ರೈನ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಮಡಿಕೇರಿಯ ದೖತಿ ಪೂಜಾರಿ ಚಾಂಪಿಯನ್ ಆಗಿ ಆಯ್ಕೆಯಾಗಿದ್ದಾರೆ.

ದೖತಿ ಪೂಜಾರಿ ಮಡಿಕೇರಿಯ ಕವಿತಾ ಕರುಂಬಯ್ಯ ಅವರ ಬ್ರೈನೋ ಬ್ರೈನ್ ಅಬಕಾಸ್ ಸಂಸ್ಥೆಯಲ್ಲಿ ಶಿಕ್ಷಣ ಪಡೆಯುತ್ತಿದ್ದು, ದುಬೈನ ಶೇಖ್ ರಶೀದ್ ಸಭಾಂಗಣದಲ್ಲಿ ಜರುಗಿದ ಅಬಕಾಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ವಿಶ್ವದ 16 ದೇಶಗಳಿಂದ 2 ಸಾವಿರ ವಿದ್ಯಾರ್ಥಿಗಳು ಈ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದು, ಕೊಡಗಿನ ಮಡಿಕೇರಿಯಿಂದ ಮೊದಲ ಬಾರಿಗೆ ಬ್ರೈನೋ ಬ್ರೈನ್ ಸಂಸ್ಥೆಯಿಂದ ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ವಿದ್ಯಾಥಿ೯ನಿಯೊಬ್ಬಳು ಪಾಲ್ಗೊಂಡಿರುವುದು ಹೆಮ್ಮೆಯ ಸಾಧನೆಯಾಗಿದೆ ಎಂದು ಕವಿತಾ ಕರುಂಬಯ್ಯ ಹೇಳಿದ್ದಾರೆ.

ದೖತಿ ಪೂಜಾರಿ ಮಡಿಕೇರಿಯ ಉಡುಪಿ ಗಾರ್ಡನ್‌ ರೆಸ್ಟೋರೆಂಟ್ ಮಾಲಕ ಜಯಂತ್ ಪೂಜಾರಿ ಮತ್ತು ಚೇತನಾ ದಂಪತಿಯ ಪುತ್ರಿಯಾಗಿದ್ದು, ಮಡಿಕೇರಿಯ ಸಂತ ಜೋಸೇಫರ ಕಾನ್ವೆಂಟ್’ನಲ್ಲಿ ಎರಡನೇ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!