ಕಲ್ಯಾಣ ಕನಾ೯ಟಕ ಉತ್ಸವ-2023 : ಡೊಳ್ಳು ಭಾರಿಸುವ ಮೂಲಕ ಉತ್ಪವಕ್ಕೆ ಚಾಲನೆ ನೀಡಿದ ದತ್ತಾತ್ರೇಯ ಪಾಟೀಲ್ ರೇವೂರ್

ಹೊಸದಿಗಂತ ವರದಿ ಕಲಬುರಗಿ :

ಕಲ್ಯಾಣ ಕನಾ೯ಟಕ ಭಾಗದ ಕಲೆ,ಸಾಹಿತ್ಯ, ಸಂಸ್ಕೃತಿ ಬಿಂಬಿಸುವ ಹಾಗೂ ಈ ಭಾಗದ ಐತಿಹಾಸಿಕ ಗತ ವೈಭವ ಸಾರುವ ಕಲ್ಯಾಣ ಕನಾ೯ಟಕ ಉತ್ಸವ 2023ಕ್ಕೆ ಕಲ್ಯಾಣ ಕನಾ೯ಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ್ ಡೊಳ್ಳು ಭಾರಿಸಿ, ಬಾಣದಿಂದ ಬಿಲ್ಲು ಬಿಡುವ ಮೂಲಕ ಉತ್ಸವಕ್ಕೆ ಹಾಗೂ ಉತ್ಸವದ ಮೆರವಣಿಗೆಗೆ ಚಾಲನೆ ನೀಡಿದರು.

ನಗರದ ಎಸ್.ಎಂ.ಪಂಡಿತ್ ರಂಗಮಂದಿರದಿಂದ ಸಾಗುವ ಮೆರವಣಿಗೆ ಖಗೆ೯ ಪೆಟ್ರೋಲ್ ಬಂಕ್, ಕುಸನೂರ ರಸ್ತೆ ಮಾಗ೯ವಾಗಿ ಗುಲ್ಬರ್ಗ ವಿವಿ ಆವಣರ ತಲುಪಲಿದ್ದು, ಕೆಕೆಆರಡಿಬಿ ಕಾಯ೯ದಶಿ೯ ಅನಿರುದ್ಧ ಶ್ರವಣ್, ಸಿಇಓ ಗಿರೀಶ್ ಬದೋಲೆ ಸೇರಿದಂತೆ ಹಲವು ಅಧಿಕಾರಿಗಳು ಸಾತ್ ನೀಡಿದರು.

ವಿವಿಧ ಕಲಾ ‌ಸಾಂಸ್ಕೃತಿಕ ತಂಡಗಳು ಭಾಗಿ :

ಕಲ್ಯಾಣ ಕನಾ೯ಟಕ ಉತ್ಸವದ ಮೆರವಣಿಗೆಯಲ್ಲಿ ನಾಡಿನ ಹಾಗೂ ಈ ಭಾಗದ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ತಮ್ಮ ಪ್ರದಶ೯ನ ನೀಡುವ ಮೂಲಕ ಮೆರವಣಿಗೆಗೆ ಖಳೆ ತರುತ್ತಿವೆ. ಶ್ರೀ ಮಂಜುನಾಥ ಹಗಲು ವೇಷ ಕಲಾವಿದ ತಂಡ, ತಮಟೆ ವಾದನ ತಂಡ, ಬಂಜಾರ ಮಹಿಳಾ ವೇಶ ದೇವಿ ತಾಂಡಾ, ವೀರಗಾಸೆ ತಂಡ ತುಮಕೂರು, ಡೊಳ್ಳು,ಹೆಜ್ಯೆ ಮೇಳಾ ,ನಾಸಿಕ ಡೋಲ್, ಪೋತರಾಜ್ ವೇಶ ಸೇರಿದಂತೆ ಹಲವು ಕಲಾ ತಂಡಗಳು ಗಮನ ಸೆಳೆಯುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!