Wednesday, August 10, 2022

Latest Posts

ಬಿಸ್ಕೆಟ್ ಕದ್ದು ತಿನ್ನುವ ಮುದ್ದು ಮಗಳು: ಅಪ್ಪನೆದುರು ಸಿಕ್ಕಿಬಿದ್ದಾಗ ಆಕೆ ಪ್ರತಿಕ್ರಿಯೆ ಅದ್ಭುತ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಮುದ್ದು ಕಂದಮ್ಮಗಳು ಏನು ಮಾಡಿದರೂ ಚೆಂದವೇ.. ಅವರ ತೊದಲು ಮಾತು, ನಿಶ್ಕಲ್ಮಶ ನಗು ಎಂಥಾ ನೋವನ್ನು ಒಂದು ಕ್ಷಣ ಮರೆಸಿ ಬಿಡುತ್ತದೆ. ಈಗಂತೂ ಸಾಮಾಜಿಕ ಜಾಲತಾಣದಲ್ಲಿ ಹಾಲುಗಲ್ಲದ ಕಂದಮ್ಮಗಳ ಸಾಕಷ್ಟು ವಿಡಿಯೋ ಹರಿದಾಡುತ್ತಲೇ ಇರುತ್ತದೆ. ಆ ಎಲ್ಲ ದೃಶ್ಯಗಳು ನಮ್ಮನ್ನು ಸೆಳೆದು ಬಿಡುತ್ತದೆ.

ಇದೀಗ ಅಂತಹದ್ದೇ ದೃಶ್ಯವೊಂದು ವೈರಲ್ ಆಗಿದೆ. ಪುಟಾಣಿ ಮಗಳು ಯಾರಿಗೂ ಗೊತ್ತಾಗದಂತೆ ಚಾಕಲೇಟ್ ಬಿಸ್ಕೆಟ್ ತಿನ್ನುತ್ತಿರುವ ವಿಡಿಯೋ ಇದು. ಈ ದೃಶ್ಯ ನೋಡಿದರೆ ನೀವು ನಗದೇ ಇರೋಕೆ ಸಾದ್ಯವೇ ಇಲ್ಲ.

ವಿಡಿಯೋದಲ್ಲಿ ಏನಿದೆ?

ಈ ಪುಟಾಣಿ ಬಿಸ್ಕೆಟ್ ಕಳ್ಳಿ ಹೆಸರು ಡೈಲನ್. ಡೈಲನ್ ಹೆಸರು ಕೂಗುತ್ತ ಆಕೆ ತಂದೆ ಮಗಳನ್ನು ಹುಡುಕುತ್ತಿರುವಲ್ಲಿನಿಂದ ವಿಡಿಯೋ ಕ್ಲಿಪ್ ಶುರುವಾಗುತ್ತದೆ. ಒಂದು ಮೂಲೆಯಲ್ಲಿ ಯಾರಿಗೂ ಗೊತ್ತಾಗದಂತೆ ಚಾಕಲೇಟ್ ಬಿಸ್ಕೆಟ್ ಡಬ್ಬಿ ಇಟ್ಟುಕೊಂಡು ಡೈಲನ್ ತಿನ್ನುತ್ತಿರುತ್ತಾಳೆ. ತಾನು ಕಅಡಗಿ ಕುಳಿತು ಬಿಸ್ಕೆಟ್ ತಿನ್ನುತ್ತಿರುವುದನ್ನು ಅಪ್ಪ ನೋಡುತ್ತಿದ್ದಂತೆಯೇ ಈ ಪುಟಾಣಿ ತೋರಿದ ಪ್ರತಿಕ್ರಿಯೆ ಹೃದಯಂಗಮ. ಮಗಳ ಪ್ರತಿಕ್ರಿಯೆ ನೋಡಿ ಆಕೆ ಅಪ್ಪನಿಗೂ ನಗು ತಡೆಯಲು ಆಗಲಿಲ್ಲ.

ಇನ್‌ಸ್ಟಾಗ್ರಾಂ ನ ಅಪ್ ವರ್ಥ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.  ಸಹಜವಾಗಿಯೇ ಈ ಸುಂದರ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ.

https://www.instagram.com/reel/CTvav6np7sl/?utm_medium=copy_link

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss