ದಾವಣಗೆರೆ | ಮತ ಎಣಿಕೆಯ ಏಳನೇ ಸುತ್ತು ಮುಕ್ತಾಯ: ಬಿಜೆಪಿ ಅಭ್ಯರ್ಥಿಗೆ ಮತ್ತೆ ಮುನ್ನಡೆ
ಹೊಸದಿಗಂತ ವರದಿ ದಾವಣಗೆರೆ: ದಕ್ಷಿಣ ಉಪಚುನಾವಣೆ ಮತ ಎಣಿಕೆಯ 7ನೇ ಸುತ್ತು ಮುಕ್ತಾಯಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ದಾಸಕರಿಯಪ್ಪ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರ ಅವರಿಗಿಂತ ಸತತವಾಗಿ ಮುನ್ನಡೆ ಕಾಯ್ದುಕೊಂಡಿದ್ದಾರೆ. ಮತ ಎಣಿಕೆ ಆರಂಭದ ಸುತ್ತಿನಿಂದಲೂ ಬಿಜೆಪಿ ಮುನ್ನಡೆಯಲ್ಲಿದೆ. ಏಳನೇ ಸುತ್ತಿನ ಮತ ಎಣಿಕೆ ಪೂರ್ಣಗೊಂಡಾಗ ಬಿಜಿಪಿ ಗೆ 25,878 ಹಾಗೂ ಕಾಂಗ್ರೆಸ್ಸಿಗೆ 21,953 ಮತ ಲಭಿಸಿವೆ. ಬಿಜೆಪಿ ಅಭ್ಯರ್ಥಿ 3,925 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಇನ್ನೂ 14 ಸುತ್ತುಗಳ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ.
Copy and paste this URL into your WordPress site to embed
Copy and paste this code into your site to embed