ದಿನ ಭವಿಷ್ಯ | ಗ್ರಹಗತಿಗಳು ಇಂದು ನಿಮಗೆ ಪೂರಕವಾಗಿವೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮೇಷ
ಧಾರ್ಮಿಕ ವಿಚಾರಗಳು ಹೆಚ್ಚು ಆಸಕ್ತಿ ಕೆರಳಿಸಬಹುದು. ಪ್ರೀತಿಯ ವಿಷಯದಲ್ಲಿ ಪೂರಕ ಬೆಳವಣಿಗೆ. ನಿಮ್ಮ ಗುರಿ ಬದಲಿಸುವ ಪ್ರಸಂಗ ಒದಗೀತು.

ವೃಷಭ
ಗ್ರಹಗತಿಗಳು ನಿಮಗೆ ಪೂರಕವಾಗಿವೆ. ಕೌಟುಂಬಿಕ ಬೇಡಿಕೆಗಳ ಈಡೇರಿಕೆ. ನೆಂಟಸ್ತಿಕೆ ಹುಡುಕುವಲ್ಲಿ ಯಶಸ್ಸು ಸಿಗುವುದು.ಆರ್ಥಿಕ ಸ್ಥಿತಿ ಸುಧಾರಣೆ.

ಮಿಥುನ
ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ. ಸಣ್ಣಪುಟ್ಟ ಅಸಮಾಧಾನ ಉಂಟಾದರೂ ಅದು ಕುಶಿಯನ್ನು ಹಾಳು ಮಾಡಲಾರದು.

ಕಟಕ
ಭಾವನೆಗಳ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿರುತ್ತೀರಿ.ಹಾಗಾಗಿ ಏರುಪೇರು ನಿಮ್ಮನ್ನು ಬಾಧಿಸದು. ಇತರರ ವರ್ತನೆಗೆ ನೀವು ನಿರ್ಲಿಪ್ತರು.

ಸಿಂಹ
ನಿಮ್ಮ ಕಠಿಣ ಶ್ರಮಕ್ಕೆ ಇಂದು ಫಲ ಸಿಗುವುದು.ಇದೇವೇಳೆ, ಕೋಪತಾಪ ನಿಯಂತ್ರಿಸಲು ಕಲಿಯಿರಿ. ಇಲ್ಲವಾದರೆ ಬಿಕ್ಕಟ್ಟಿಗೆ ಸಿಲುಕಬಹುದು.

ಕನ್ಯಾ
ಕೆಲವರು ನಿಮ್ಮತ್ತ ಟೀಕಾಸ್ತ್ರ ಪ್ರಯೋಗಿಸ ಬಹುದು. ಆದರೆ ಅದು ನಿಮ್ಮನ್ನು ಬಾಧಿಸದಂತೆ ನೋಡಿಕೊಳ್ಳಿ. ಸಂಯಮದಿಂದ ವರ್ತಿಸಿರಿ.

ತುಲಾ
ವೃತ್ತಿಯಲ್ಲಿ ನೀವು ಬಯಸದ ಬೆಳವಣಿಗೆ ಸಂಭವಿಸಬಹುದು. ಅದನ್ನು ನಿಭಾಯಿಸಲು ನಿಮ್ಮೆಲ್ಲಾ ಶ್ರಮ ಹಾಕಬೇಕಾಗುವುದು.ಕೌಟುಂಬಿಕ ಸಹಕಾರ.

ವೃಶ್ಚಿಕ
ನಿಮ್ಮ ಕೆಲವು ವರ್ತನೆ ಬದಲಿಸಬೇಕಾದೀತು.ಇಲ್ಲವಾದರೆ  ಸಮಸ್ಯೆಎದುರಿಸುವಿರಿ. ಪ್ರತಿಯೊಂದಕ್ಕೂ ರೇಗುವುದನ್ನು ನಿಲ್ಲಿಸಿರಿ.ಸಹನೆಯಿರಲಿ.

ಧನು
ಕೌಟುಂಬಿಕ ಸಮಸ್ಯೆ ಮನಸ್ಸನ್ನು ಕೊರೆಯಬಹುದು.ಅದರ ಪರಿಹಾರ ಕಷ್ಟವೆನಿಸಬಹುದು.ಇತರರ ಸಹಾಯ ಪಡೆಯಿರಿ.

ಮಕರ
ಆಪ್ತರೊಂದಿಗೆ ಮಾತಿನ ಚಕಮಕಿ ನಡೆದೀತು. ನೀವು ಸಂಯಮ ವಹಿಸುವುದು ಅವಶ್ಯ. ಪರಿಸ್ಥಿತಿ ಬಿಗಡಾಯಿಸಲು ಅವಕಾಶ ಕೊಡಬೇಡಿ.ಆರ್ಥಿಕ ಒತ್ತಡ.

ಕುಂಭ
ಕೆಲವು ವ್ಯಕ್ತಿಗಳು ಮಾನಸಿಕ ಶಾಂತಿ ಕದಡುತ್ತಾರೆ.ಅವರ ಅಭಿಪ್ರಾಯ ಕೇಳಬೇಕೆಂಬ ಒತ್ತಡ ಹೇರುವರು.ಆರ್ಥಿಕ ಬಿಕ್ಕಟ್ಟು ಹೆಚ್ಚಳ.

ಮೀನ
ಉಲ್ಲಾಸದ ಮನಸ್ಥಿತಿ. ಕಾರ್ಯ ಸಾಫಲ್ಯ. ಪ್ರೀತಿಯ ಬಂಧ ಇನ್ನಷ್ಟು ಬಿಗಿ. ಕೌಟುಂಬಿಕ ಭಿನ್ನಮತ ನಿವಾರಣೆ. ವಸ್ತು ಖರೀದಿ ಉತ್ಸಾಹ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!