ಮೇಷ
ನಿಮ್ಮ ಸುತ್ತಲಿನವರಿಗೆ ನಿಮ್ಮ ನಿಲುವನ್ನು ಸ್ಪಷ್ಟಪಡಿಸಿ. ಇಲ್ಲವಾದರೆ ನಿಮ್ಮನ್ನು ಅಪಾರ್ಥ ಮಾಡಿಕೊಳ್ಳುವರು. ಆರೋಗ್ಯಕರ ಆಹಾರ ಸೇವಿಸಿರಿ.
ವೃಷಭ
ಮೇಲಧಿಕಾರಿಗಳ ಜತೆ ಸಂಘರ್ಷ ಒಳಿತಲ್ಲ. ಪ್ರಾಕ್ಟಿಕಲ್ ಆಗಿ ಚಿಂತಿಸಿ ನಿಮ್ಮ ಗುರಿ ಸಾಧಿಸಿರಿ. ಆದಾಯ ಮತ್ತು ಖರ್ಚಿನ ಮಧ್ಯೆ ಸಮತೋಲನ ಇರಲಿ.
ಮಿಥುನ
ಆಶಾಂತಿ ಕಾಡಬಹುದು. ಧಾರ್ಮಿಕ, ಆಧ್ಯಾತ್ಮಿಕ ವಿಚಾರಗಳು ನಿಮ್ಮ ಮನಸ್ಸಿಗೆ ನೆಮ್ಮದಿ ತರುವುದು. ಶೀತ ಜ್ವರದಂತಹ ಬಾಧೆ ಕಾಡಬಹುದು.
ಕಟಕ
ದಂಪತಿ ಮಧ್ಯೆ ಭಿನ್ನಾಭಿಪ್ರಾಯ ಸಂಭವ. ಮುಕ್ತ ಮಾತುಕತೆ ಅದಕ್ಕೆ ಪರಿಹಾರ. ಆರ್ಥಿಕ ಪರಿಸ್ಥಿತಿ ಉತ್ತಮ. ಖರ್ಚು ಹೆಚ್ಚುವ ಪ್ರಸಂಗವೂ ಬರಲಿದೆ.
ಸಿಂಹ
ಕೆಲಸದ ಹೊರೆಯು ಮನಸ್ಸಿನ ನೆಮ್ಮದಿ ಕಸಿಯಬಹುದು. ಸ್ನೇಹಿತರಿಂದ ಯಾವುದೋ ವಿಚಾರದಲ್ಲಿ ಒತ್ತಡ ಅನುಭವಿಸುವಿರಿ.
ಕನ್ಯಾ
ವೃತ್ತಿಯಲ್ಲಿ ಎಲ್ಲ ಕೆಲಸದ ಹೊರೆ ನಿಮಗೇ ಬೀಳಬಹುದು. ಅದನ್ನು ಇತರರಿಗೂ ಹಂಚಿರಿ. ಆಹಾರದಲ್ಲಿ ಪಥ್ಯ ಸಾಧಿಸುವುದರಿಂದ ಒಳಿತಾಗಬಹುದು.
ತುಲಾ
ಹೊಸ ಯೋಜನೆ, ವ್ಯವಹಾರ ನಿಮಗೆ ಶುಭ ತರಲಿದೆ. ಆರ್ಥಿಕ ಲಾಭದ ಸಂಕೇತವಿದೆ. ಬಾಕಿ ಇರುವ ಕೆಲಸ ಪೂರೈಸಲು ಮಾತ್ರ ಮರೆಯದಿರಿ.
ವೃಶ್ಚಿಕ
ನಿಮ್ಮ ಸುತ್ತಲಿನ ವ್ಯಕ್ತಿಗಳ ಕುರಿತಾದ ನಿಮ್ಮ ತಪ್ಪು ಅಭಿಪ್ರಾಯ ನೀಗುವ ಪ್ರಸಂಗ ಸಂಭವ. ಹಣದ ವಿಚಾರದಲ್ಲಿ ನಿಮ್ಮ ಅಂತಃಪ್ರೇರಣೆಯಂತೆ ನಡೆದುಕೊಳ್ಳಿ.
ಧನು
ಏಕಾಂಗಿ ಕಾರ್ಯಕ್ಕಿಂತ ಸಂಘಟಿತ ಕಾರ್ಯಕ್ಕೆ ಆದ್ಯತೆ ನೀಡಿ. ಇತರರ ಸಹಕಾರ ತಿರಸ್ಕರಿಸಬೇಡಿ. ಕೌಟುಂಬಿಕ ಸಮಸ್ಯೆಗೆ ವಿಳಂಬವಾದರೂ ಪರಿಹಾರ ಸಿಗಲಿದೆ.
ಮಕರ
ಇತರರ ಕೆಲಸವನ್ನು ಕಟುವಾಗಿ ಟೀಕಿಸಬೇಡಿ. ಅನವಶ್ಯ ಸಂಘರ್ಷ ಉಂಟಾದೀತು. ಆರೋಗ್ಯದ ಚಿಂತೆಯೊಂದು ಪರಿಹಾರ ಕಾಣುವುದು.
ಕುಂಭ
ಮನೆಯ ಹೊರಗಿನ ಕಾರ್ಯಕ್ಕೆ ಇಂದು ಹೆಚ್ಚಿನ ಶ್ರಮ ವಿನಿಯೋಗಿಸುವಿರಿ. ದಿನದ ಅಂತ್ಯಕ್ಕೆ ಎಲ್ಲವು ಸರಿಯಾಗಿ ಮುಗಿದ ತೃಪ್ತಿ ಉಂಟಾಗುವುದು.
ಮೀನ
ನಿಮ್ಮ ಮನೋಭಾವ ಬದಲಿಸಬೇಕಾದ ಅಗತ್ಯವಿದೆ. ಇಲ್ಲವಾದರೆ ಇತರರ ಅಸಹಕಾರ ಎದುರಿಸುವಿರಿ. ಆರೋಗ್ಯದ ಕಡೆ ಹೆಚ್ಚಿನ ಕಾಳಜಿಯಿರಲಿ.